April 18, 2025
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿ

ಅಕ್ರಮ ಕಸಾಯಿಖಾನೆಗೆ ಬೆಳ್ತಂಗಡಿ ಪೊಲೀಸ್ ದಾಳಿ: ದನದ ಮಾಂಸ ಹಾಗೂ ಇಬ್ಬರು ಆರೋಪಿಗಳ ಬಂಧನ

ಬೆಳ್ತಂಗಡಿ : ಗುರುವಾಯನಕೆರೆಯಲ್ಲಿರುವ ಅಕ್ರಮ ಕಸಾಯಿಖಾನೆ ಅಡ್ಡೆ ಮೇಲೆ ಖಚಿತ ಮಾಹಿತಿ ಮೇರೆಗೆ ಫೆ.16ರಂದು ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ.

ಹಲವರು ಸಮಯಗಳಿಂದ ಅಕ್ರಮ ಕಸಾಯಿಖಾನೆ ನಡೆಸುತ್ತಿದ್ದ ಇಬ್ಬರು ಆರೋಪಿಗಳಾದ ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಉಮ್ಮರಬ್ಬ(42) ಮತ್ತು ಪಡಂಗಡಿ ಗ್ರಾಮದ ಪೆರ್ಣಮಂಜ ನಿವಾಸಿ ಕರೀಂ(34) ಎಂಬವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಶಕ್ತಿನಗರದಲ್ಲಿರುವ ಅನ್ವಾರ್ ಎಂಬಾತನಿಗೆ ಸೇರಿದ ಜಾಗದಲ್ಲಿ ಅನಧಿಕೃತ ಕಸಾಯಿಖಾನೆಯಲ್ಲಿ ಇಬ್ಬರು ಸೇರಿ ದನವನ್ನು ವಧೆ ಮಾಡುವಾಗ ಬೆಳ್ತಂಗಡಿ ಪೊಲೀಸರು ಫೆ.16 ರಂದು ಸಂಜೆ ದಾಳಿ ಮಾಡಿದ್ದು. ಸ್ಥಳದಲ್ಲಿ ಸುಮಾರು 85 ಕೆ.ಜಿ ದನ ಮಾಂಸ ,ಕತ್ತಿ, ಒಂದು ಬೊಲೆರೋ ವಾಹನ ವಶಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಬೆಳ್ತಂಗಡಿ ಪಶು ವೈದ್ಯಾಧಿಕಾರಿ ರವಿ ಕುಮಾರ್ ಪರಿಶೀಲನೆ ನಡೆಸಿದ್ದಾರೆ.

ಬೆಳ್ತಂಗಡಿ ಇನ್ಸ್ಪೆಕ್ಟರ್ ಸುಬ್ಬಪುರ್ ಮಠ ಮಾರ್ಗದರ್ಶನದಲ್ಲಿ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಯಲ್ಲಪ್ಪ.ಹೆಚ್.ಎಮ್ ನೇತೃತ್ವದ ಸಿಬ್ಬಂದಿ ಬೆನ್ನಚ್ಚನ್, ಪ್ರಮೋದ್ ನಾಯ್ಕ, ವಿಶ್ವನಾಥ್ ನಾಯ್ಕ್, ಜಗದೀಶ್ ಅತ್ತಾಜೆ, ಚರಣ್ ರಾಜ್, ಶಿವರಾಜ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಬೆಳ್ತಂಗಡಿ ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳು ಹಾಗೂ ಸಮಸ್ಯೆಗಳನ್ನು ಈಡೇರಿಸುವಂತೆ ತಹಶೀಲ್ದಾರರ ಮುಖಾಂತರ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ಮನವಿ

Suddi Udaya

ಪೆರಿಂಜೆ ಶ್ರೀ ಧ. ಮಂ. ಅನುದಾನಿತ ಪ್ರೌಢಶಾಲೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ಕಣಿಯೂರು: ಟೀಂ ನವಕೇಸರಿ ಮಲೆಂಗಲ್ಲು ಮತ್ತು ಅರಣ್ಯ ಇಲಾಖೆ ವತಿಯಿಂದ ವನಮಹೋತ್ಸವ

Suddi Udaya

ಬೆಳ್ತಂಗಡಿ ತಾಲೂಕು ಆಡಳಿತ ಸೌಧಕ್ಕೆ ದ.ಕ.ಜಿಲ್ಲಾಧಿಕಾರಿ ಮುಲೈ ಮುಹಿಲನ್ ಧಿಡೀರ್ ಭೇಟಿ

Suddi Udaya

ಕುಪ್ಪೆಟ್ಟಿ ಶ್ರೀ ಗಣೇಶ ಭಜನಾ ಮಂದಿರದಿಂದ ಶಾಲಾ ಮಕ್ಕಳಿಗೆ ಪುಸ್ತಕ, ಬ್ಯಾಗ್ ವಿತರಣೆ

Suddi Udaya

ಗುರುವಾಯನಕೆರೆ : ಪಿಎಂ ಕುಸುಮ್ -ಸಿ ಯೋಜನೆಯಡಿ ಸೋಲಾರ್ ಪಾರ್ಕ್ ನಿರ್ಮಾಣಕ್ಕೆ ಯೋಜನೆ

Suddi Udaya
error: Content is protected !!