ಬೆಳಾಲು: ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ವ್ಯವಸ್ಥಾಪನ ಸಮಿತಿ, ಮಹಿಳಾ ಸಮಿತಿ, ಅನಂತೇಶ್ವರ ಭಜನಾ ಮಂಡಳಿ ಹಾಗೂ ಅನಂತೇಶ್ವರ ಫ್ರೆಂಡ್ಸ್ ವತಿಯಿಂದ ಮಾಪಲ ಕೂಡಲಕೆರೆ ಬೆಳಾಲು ಮುಖ್ಯರಸ್ತೆಯ ಬದಿಯಲ್ಲಿ ಬಿಸಾಡಿರುವ ಪ್ಲಾಸ್ಟಿಕ್, ಇನ್ನಿತರ ಕಸವನ್ನು ಹೆಕ್ಕುವ ಮೂಲಕ ಸ್ವಚ್ಛತಾ ಕಾರ್ಯವು ಫೆ.16ರಂದು ನಡೆಯಿತು.

ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅನಂತೋಡಿ ಶ್ರೀ ಅನಂತ ಪದ್ಮನಾಭ ದೇವಸ್ಥಾನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು ನೋಟರಿ ವಕೀಲರಾದ ಶ್ರೀನಿವಾಸ ಗೌಡ, ಉಪಾಧ್ಯಕ್ಷ ಮಮತಾ ದಿನೇಶ್ ಪೂಜಾರಿ ಉಪ್ಪಾರು ,ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ವಿದ್ಯಾ ಶ್ರೀನಿವಾಸ ಗೌಡ, ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿ ಪಂಚಾಯತ್ ಸದಸ್ಯರಾದ ಸತೀಶ್ ಗೌಡ ಎಳ್ಳುಗದ್ದೆ, ಮಹಿಳಾ ಸಮಿತಿಯ ಅಧ್ಯಕ್ಷೆ ಹೇಮಲತಾ ಶ್ರೀನಿವಾಸ ಗೌಡ ಗಣಪನಗುತ್ತು, ಭಜನಾ ಮಂಡಳಿಯ ಅಧ್ಯಕ್ಷ ನವೀನ್ ಗೌಡ ಕಂಬಳದಡ್ಡ, ಕಾರ್ಯದರ್ಶಿ ವಿಘ್ನೇಶ್, ಅನಂತೋಡಿ ಕುಣಿತ ಭಜನಾ ತಂಡದ ಸಂಚಾಲಕರಾದ ಹರೀಶ್ ಪೋಸೊಟ್ಟು ಹಾಗೂ ಸೌಮ್ಯ ಅನಂತೋಡಿ ಸದಸ್ಯರಾದ ಮೋಹನ್ ಗೌಡ ವಚ್ಚ ,ಶಾಲಿನಿ ಶಶಿಧರ, ಗ್ರಾಮ ಪಂಚಾಯತಿ ಸದಸ್ಯರಾದ ಯಶೋಧ ಕುತ್ಯರ್ ಗುಂಡಿ , ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ವಿಮಲ ಓಡಿಪ್ರೊಟ್ಟು, ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕರಾದ ಸುಂದರ ನೀರಕಟ್ಟೆ, ಬೈಲುವಾರು ಸಮಿತಿಯ ಸಂಚಾಲಕರಾದ ರಾಜೇಶ್ ಪಾರಳ, ಕಿರಣ್ ಸುವರ್ಣ ಈರೆoತ್ಯಾರು, ಸಂತೋಷ್ ಮಡಿವಾಳ ಕೃಷ್ಣಪ್ಪ, ಕುತ್ಯರ್ಗುಂಡಿ , ಯಶೋಧರ ಅನಂತೋಡಿ , ಹರೀಶ್ ಮಂಡೆತ್ಯಾರು ಹಾಗೂ ಹಲವಾರು ಕ್ಷೇತ್ರದ ಭಕ್ತಾದಿಗಳು ಈ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಯಿತು.