April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿ

ಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆ ದುರಸ್ತಿ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಆಗಬೇಕಾಗಿರುವ ಬದಲಾವಣೆ ಬಗ್ಗೆ ಲೋಕೋಪಯೋಗಿ ಸಚಿವರಿಗೆ ಮನವಿ ಸಲ್ಲಿಕೆ

ಬೆಳ್ತಂಗಡಿ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ವಿವಿಧ ಕಾರ್ಯಕ್ರಮಗಳಿಗೆ ಆಗಮಿಸಿದ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ರವರಿಗೆ ಗುರುವಾಯನಕೆರೆಯಲ್ಲಿ ಸಾರ್ವಜನಿಕರು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ರಕ್ಷಿತ್ ಶಿವರಾಮ್ ಇವರ ನೇತೃತ್ವದಲ್ಲಿ, ಗುರುವಾಯನಕೆರೆ – ಉಪ್ಪಿನಂಗಡಿ ರಸ್ತೆ ದುರಸ್ತಿ ಬಗ್ಗೆ , ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಕೆಲವೊಂದು ಕಡೆ ಆಗಬೇಕಿರುವ ಬದಲಾವಣೆಗಳ ಬಗ್ಗೆ ಮನವಿಯನ್ನು ಸಲ್ಲಿಸಿದರು. ಈ ಮನವಿಗೆ ಸಚಿವರು ಅಲ್ಲೇ ಇದ್ದ ಅಧಿಕಾರಿಗಳಿಗೆ ಶೀಘ್ರದಲ್ಲಿ ಪರಿಹರಿಸುವ ಬಗ್ಗೆ ಆದೇಶವನ್ನು ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಗೋಪಿನಾಥ್ ನಾಯಕ್, ಪ್ರಮುಖರಾದ ಪ್ರವೀಣ್ ಹಳ್ಳಿ ಮನೆ, ವಿಶ್ವೇಶ್ ಕಿಣಿ, ದಿನೇಶ್ ಮೂಲ್ಯ ಕೊಂಡೆಮಾರ್, ಧನಂಜಯ್ ರಾವ್, ನಜೀರ್, ಶರೀಫ್, ಅಬ್ದುಲ್ ಕರೀಮ್, ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು

Related posts

ಇಲಾಖಾಧಿಕಾರಿಗಳ ಗೈರು ಹಾಜರಾತಿಗೆ ಗ್ರಾಮಸ್ಥರು ಅಸಮಾಧಾನ- ಅಳದಂಗಡಿ ಗ್ರಾಮ ಸಭೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಜೂನಿಯರ್ ಜೆಸಿ ಸಪ್ತಾಹ ಸಂಪನ್ನ

Suddi Udaya

ಬೆಳ್ತಂಗಡಿಯ ಯುವ ನ್ಯಾಯವಾದಿ ಪ್ರಜ್ವಲ್ ನಿಧನ

Suddi Udaya

ಪುದುವೆಟ್ಟು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರಮದಾನ

Suddi Udaya

ಬಳಂಜ ಗ್ರಾ.ಪಂ. ನ ಮೊದಲ ಹಂತದ ಗ್ರಾಮಸಭೆ

Suddi Udaya

ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ಎನ್ ಎಸ್ ಎಸ್ ಘಟಕ ಮತ್ತು ಯುವ ರೆಡ್ ಕ್ರಾಸ್ ಘಟಕದ ಅಂಗವಾಗಿ ರಕ್ತದಾನ ಶಿಬಿರ

Suddi Udaya
error: Content is protected !!