ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಕೋಟಕ್ ಲೈಫ್ 2ನೇ ವರ್ಷಕ್ಕೆ ಪಾದಾರ್ಪಣೆ

ಬೆಳ್ತಂಗಡಿ: ಇಲ್ಲಿಯ ವೈಭವ್ ಆರ್ಕೆಡ್ ನಲ್ಲಿ ಕೋಟಕ್ ಲೈಫ್ ಆಫೀಸ್ ಉದ್ಘಾಟನೆಗೊಂಡು 1 ವರ್ಷ ಪೂರೈಸಿ 2ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದ ಸಂಭ್ರಮಾಚರಣೆಯನ್ನು ಕೋಟಕ್ ಲೈಫ್ ಏರ್ಯ ಹೆಡ್ ಮೈಕಲ್ ಡಿಸೋಜ ರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ ಬೆಳ್ತಂಗಡಿ ಬ್ರಾಂಚ್ ಜನತೆಗೆ ಒಂದು ವರ್ಷದಲ್ಲಿ ರೂ. 55 ಕೋಟಿ ಆರ್ಥಿಕ ಭದ್ರತೆ ನೀಡಿದೆ ಇದು ಬ್ರಾಂಚ್ ವ್ಯಾಪ್ತಿಯ ಸಾಧನೆಯಲ್ಲಿ ದೇಶದಲ್ಲಿ 4 ನೇ ಸ್ಥಾನ ರಾಜ್ಯದಲ್ಲಿ 2 ನೇ ಸ್ಥಾನ ಪಡೆದು 2ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಮುಂದಿನ ವರ್ಷದಲ್ಲಿ ಬೆಳ್ತಂಗಡಿ ಕೋಟಕ್ ಲೈಫ್ ದೇಶದಲ್ಲೇ ಅತ್ಯುನ್ನತ ಸ್ಥಾನದಲ್ಲಿ ಗುರುತಿಸುವಂತಾಗಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕೋಟಕ್ ಲೈಫ್ ಮಂಗಳೂರು ಚೀಫ್ ಎಜೇಂನ್ಸಿ ಪಾಲುದಾರರಾದ ಪದ್ಮ ಬೆಳಚಡ ಹಾಗೂ ಸೀನಿಯರ್ ಎಜೇಂನ್ಸಿ ಪಾಲುದಾರ ಚಂದ್ರಶೇಖರ್ ರವರುಗಳು ಮಾತನಾಡಿ ಮುಂದಿನ ದಿನಗಳಲ್ಲೂ ಜನತೆಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಬೆಳ್ತಂಗಡಿ ಬ್ರಾಂಚ್ ಮುಂಚೂಣಿಯಲ್ಲಿ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಬೆಳ್ತಂಗಡಿ, ಕಡಬ, ಪುತ್ತೂರು ಬ್ರಾಂಚ್ ಮ್ಯಾನೇಜರ್ ಗಳು ಪ್ರಜ್ವಲ್ ಅಡೂರ್, ದುರ್ಗಾಪ್ರಸಾದ್, ರವಿ ಆಚಾರ್ಯ, ಚೀಫ್ ಎಜೇಂನ್ಸಿ ಪಾಲುದಾರರಾದ ದಿನಕರ್ ಕೆ., ಗಿರೀಶ್ ಬಿ. ಜಿ., ಸೀನಿಯರ್ ಎಜೇಂನ್ಸಿ ಪಾಲದಾರರಾದ ಅನಿತಾ ಪ್ರದೀಪ್ ಶೆಟ್ಟಿ, ಯೋಗೀಶ್ ಆಳಂಬಿಲ ಕೊಕ್ಕಡ, ಬೆಳ್ತಂಗಡಿ, ಕಡಬ., ಪುತ್ತೂರು, ಮಡಿಕೇರಿ ಬ್ರಾಂಚ್ ಏಜೇಂನ್ಸಿ ಪಾಲುದಾರರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ಪುಂಜಾಲಕಟ್ಟೆ ಕೆ ಪಿ ಎಸ್ (ಪ್ರೌಢಶಾಲಾ ವಿಭಾಗ,) : ಶಾಲಾ ವಿದ್ಯಾರ್ಥಿ ಸರಕಾರಕ್ಕೆ ತಂತ್ರಜ್ಞಾನ ಬಳಸಿ ಮತದಾನ

Suddi Udaya

ಮಡಂತ್ಯಾರು ರೋಟರಿ ಕ್ಲಬ್ ವತಿಯಿಂದ ಬಡ್ಡಡ್ಕ ಅಂಗನವಾಡಿ ಕೇಂದ್ರಕ್ಕೆ ಪೀಠೋಪಕರಣಗಳ ಕೊಡುಗೆ

Suddi Udaya

ಪೆರ್ನೆಯ ಯುವಕ ಯತೀಶ್ ಕೊಲೆ ಪ್ರಕರಣ : ಮೂವರು ಆರೋಪಿಗಳನ್ನು ಬಂಧಿಸಿದ ಬೆಳ್ತಂಗಡಿ ಪೊಲೀಸರು

Suddi Udaya

ವೇಣೂರು: ಸಹೋದರರಿಬ್ಬರಿದ್ದ ಬೈಕ್ ಗೆ ಗೂಡ್ಸ್ ರಿಕ್ಷಾ ಡಿಕ್ಕಿ: ಓರ್ವ ಸ್ಥಳದಲ್ಲೇ ಮೃತ್ಯು, ಮತ್ತೋರ್ವನಿಗೆ ಗಂಭೀರ ಗಾಯ

Suddi Udaya

ಕಡಿದು ಬಿದ್ದ ವಿದ್ಯುತ್ ತಂತಿ, ಬೈಕ್ ಸವಾರರು ಪಾರು

Suddi Udaya

ರಾಜ್ಯಮಟ್ಟದ ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ಬಜಿರೆ ಶಾಲೆಯ ವಿದ್ಯಾರ್ಥಿನಿ ಕ್ಷಮಾ ವಿದ್ಯಾರ್ಥಿ ವೇತನಕ್ಕೆ ಆಯ್ಕೆ

Suddi Udaya
error: Content is protected !!