
ಅಳದಂಗಡಿ: ಇತಿಹಾಸ ಪ್ರಸಿದ್ಧ ಅಜಿಲ ಸೀಮೆ ಅಳದಂಗಡಿಯ ಶ್ರೀ ಸೋಮನಾಥೇಶ್ವರಿ ದೇವಸ್ಥಾನಕ್ಕೆ ಮಾಜಿ ಇಂಧನ ಸಚಿವರು ಕಾರ್ಕಳದ ಶಾಸಕ ವಿ ಸುನೀಲ್ ಕುಮಾರ್ ರವರು ಚುನಾವಣಾ ಸಮಯದಲ್ಲಿ ಹೇಳಿದ ಹರಕೆಯ ಪ್ರಯುಕ್ತ ಫೆ.16ರಂದು ಸನ್ನಿಧಿಯಲ್ಲಿ ರಂಗಪೂಜೆ ಹಾಗೂ ಶ್ರೀ ಸತ್ಯದೇವತೆ ದೈವಸ್ಥಾನದಲ್ಲಿ ಕೋಲ ನೆರವೇರಿಸಿ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿದರು .


ಈ ವೇಳೆ ಆಡಳಿತ ಮೊಕ್ತೇಸರರು ಶಿವಪ್ರಸಾದ್ ಅಜಿಲರವರು ಸುನೀಲ್ ಕುಮಾರ್ ದಂಪತಿಯನ್ನು ಕ್ಷೇತ್ರದ ವತಿಯಿಂದ ಗೌರವಿಸಿದರು .ನೂರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದರು.