ಕಳಿಯ : ದೇಯಿ ಬೈದೆದಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಮಾರ್ಚ್ 1 ರಿಂದ ಮಾರ್ಚ್ 5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಯಶಸ್ಸು ಗೊಳಿಸುವ ಬಗ್ಗೆ ಬೆಳ್ತಂಗಡಿ ತಾಲೂಕಿನ ಕಳಿಯ ನ್ಯಾಯ ತರ್ಪು ಗ್ರಾಮಗಳ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಭಕ್ತಾಭಿಮಾನಿಗಳ ಸಮಾಲೋಚನ ಸಭೆಯನ್ನು ಫೆ.16 ರಂದು ಕಳಿಯ ಗ್ರಾಮದ ಕೇಶವ ಪೂಜಾರಿಯವರ ಮನೆಯಲ್ಲಿ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿ ಕೊಂಡಿದ್ದ ಶ್ರೀ ಗುರುನಾರಾಯಣ ಸೇವಾ ಸಂಘ (ರಿ) ಬೆಳ್ತಂಗಡಿ ಇದರ ಮಾಜಿ ಅಧ್ಯಕ್ಷ,ಶ್ರೀ ಕ್ಷೇತ್ರ ಗೆಜ್ಜಗಿರಿ ಇಲ್ಲಿನ ಗೌರವಾಧ್ಯಕ್ಷ ಬಿ ಪೀತಾಂಬರ ಹೆರಾಜೆಯವರುವರು ಕ್ಷೇತ್ರದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶ್ರೀ ಕ್ಷೇತ್ರ ನಡೆದು ಬಂದ ಹಾದಿಯನ್ನು ಸಭೆಗೆ ವಿವರಿಸಿದರು.
ಶ್ರೀ ಕ್ಷೇತ್ರ ಗೆಜ್ಜೇಗಿರಿ ಜಾತ್ರೋತ್ಸವ ಸಮಿತಿಯ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕರಾದ ನಿತ್ಯಾನಂದ ನಾವರ ರವರು ಶ್ರೀ ಕ್ಷೇತ್ರದಲ್ಲಿ ನಡೆಯುವ ಮಡಿಲು ಸೇವೆ ಹಾಗೂ ಉತ್ಸವದ ಮಾಹಿತಿಯನ್ನು ಸಭೆಗೆ ನೀಡಿ ತಾಲೂಕಿನ ಎಲ್ಲಾ ಭಕ್ತಾಭಿಮಾನಿಗಳನ್ನು ಜಾತ್ರೋತ್ಸವಕ್ಕೆ ಆಮಂತ್ರಿಸಿದರು .
ಶ್ರೀ ಗುರು ನಾರಾಯಣ ಸೇವಾ ಸಂಘ ಬೆಳ್ತಂಗಡಿ ಇಲ್ಲಿನ ಮಾಜಿ ಅಧ್ಯಕ್ಷರಾದ ಜಯರಾಮ ಬಂಗೇರ ಹೆರಾಜೆ , ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಪೂಜಾರಿ ಮೆದಿನ, ಕುವೆಟ್ಟು ವಲಯ ಸಂಚಾಲಕರುಗಳಾದ ಪ್ರಶಾಂತ್ ಕೋಟ್ಯಾನ್ ಪಾಧೆಗುತ್ತು, ಯೋಗೀಶ್ ಸುವರ್ಣ ಅಡ್ಡ ಕೊಡಂಗೆ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರೂ, ಕುವೆಟ್ಟು ವಲಯ ಸಂಚಾಲಕ ಹರೀಶ್ ಕುಮಾರ್ ಕಳಿಯ ರವರು ಕಾರ್ಯಕ್ರಮ ನಿರೂಪಿಸಿ ಪ್ರಸ್ತಾವನೆಗೆದರು.
ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಪೂಜಾರಿ ಮೆದಿನ, ಹಿರಿಯರಾದ ಶ್ರೀಧರ ಪೂಜಾರಿ ಮೇದಿನ ರಾಘವ ಪೂಜಾರಿ ಮೆದಿನ, ಶೇಖರ ಪೂಜಾರಿ, ಧರ್ಣಪ್ಪ ಪೂಜಾರಿ ಹರ್ಮಾಡಿ, ವಸಂತ ಪೂಜಾರಿ ಕುಳಾಯಿ,ಜಯರಾಮ ಪೂಜಾರಿ ಕುಳಾಯಿ, ಶೇಖರ ಪೂಜಾರಿ ಕುಳಾಯಿ, ಅಶೋಕ ಪೂಜಾರಿ ಮೆದಿನ, ಪ್ರಜ್ಞಾ ಕುಳಾಯಿ, ಪ್ರಾಚಿ ಕುಳಾಯಿ, ಜಾನಕಿ ಕುಳಾಯಿ, ಆಯಾನ್ಸ್ ಕುಳಾಯಿ ಹಾಗೂ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.
ಕುವೆಟ್ಟು ವಲಯ ಸಂಚಾಲಕರೂ, ಕೃಷಿ ಪತ್ತಿನ ಸಹಕಾರಿ ಸಂಘ ಕಳಿಯ ಇದರ ನಿರ್ದೇಶಕರೂ ಆಗಿರುವ ಕೇಶವ ಪೂಜಾರಿ ಕಳಿಯ ರವರು ಬಂದಂತಹ ಅತಿಥಿಗಳನ್ನು ಸ್ವಾಗತಿಸಿದರು. ಶ್ರೀಮತಿ ಅರುಣ ಕೇಶವ ರವರ ಧನ್ಯವಾದವಿತ್ತರು.