ಬೆಳ್ತಂಗಡಿ : ಶ್ರೀ ಧವಳ ಕಾಲೇಜಿನ ಎನ್ಎಸ್ಎಸ್ ಶಿಬಿರದ ಸಮಾರೋಪ ಸಮಾರಂಭವು ಕರಿಮಣೇಲು ಸಂತ ಜೂಡರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.14 ರಂದು ಜರಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಾರ್ಶ್ವನಾಥ ಅಜ್ರಿ ಪ್ರಾಂಶುಪಾಲರು ಶ್ರೀ ದವಳ ಕಾಲೇಜ್ ಮೂಡಬಿದಿರಿ ಇವರು ವಹಿಸಿ ಮಾತನಾಡಿ ಎನ್ಎಸ್ಎಸ್ ಒಬ್ಬ ವ್ಯಕ್ತಿಯ ಪರಿಪೂರ್ಣತೆಗೆ ಹೇಗೆ ಸಾಧ್ಯವಾಗುತ್ತದೆ ಎನ್ನುವಂತದ್ದನ್ನು ವಿವರಿಸಿದರು.
ಸಮಾರಂಭದ ಸಮರೋಪ ಭಾಷಣವನ್ನು ಕೆ. ಹೇಮರಾಜ್ ಸಂಚಾಲಕರು ಡಿ ಜೆ ವಿ ಸಂಘ ಮೂಡಬಿದ್ರೆ ನಿರ್ವಹಿಸಿಮಾತನಾಡಿ ಎನ್ಎಸ್ಎಸ್ ಕೈಗೊಂಡ ಕಾರ್ಯ ಚಟುವಟಿಕೆಗಳನ್ನು ಶ್ಲಾಘಿಸಿದರು. ವಿದ್ಯಾರ್ಥಿಗಳು ಯಶಸ್ವಿಯಾಗಲು ಇಂತಹ ಕಾರ್ಯಕ್ರಮಗಳನ್ನು ಅಯೋಜಿಸುವುದರಿಂದ ಸಾಧ್ಯವಾಗುತ್ತದೆ ಎಂದು ವಿವರಿಸಿದರು.
ಮುಖ್ಯ ಅತಿಥಿಗಳಾಗಿ ಸಂತ ಜೂಡರ ಹಿರಿಯ ಪ್ರಾಥಮಿಕ ಶಾಲೆ ಕರಿಮಣೇಲು ಮುಖ್ಯೋಪಾಧ್ಯಾಯರು ಶ್ರೀಮತಿ ಮಾಸರ್ಲಿನ್ ಲೀನಾ ಪಿರೇರಾ , ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್, ವೇಣೂರು ಕುಂಭಶ್ರೀ ಶಿಕ್ಷಣ ಸಂಸ್ಥೆ ಅಧ್ಯಕ್ಷ ಗಿರೀಶ್ ಕೆ.ಎಚ್ , ಎಚ್ ಮೊಹಮ್ಮದ್ ಪತ್ರಕರ್ತರು, ಶ್ರೀ ಶ್ರೀಧರ ಆಚಾರ್ಯ ಉದ್ಯಮಿಗಳು ಖಂಡಿಗ, ಅರವಿಂದ ಶೆಟ್ಟಿ ಖಂಡಿಗ ಉಪಸ್ಥಿತರಿದ್ದರು.
ಸಹಾಯಕ ಪ್ರಾಧ್ಯಾಪಕರು ಶ್ರೀಮತಿ ಯಶೋಧ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಸಂತೋಷ್ ಶೆಟ್ಟಿ ವಂದಿಸಿದರು. ಕುಮಾರಿ ದೀಪಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು . ಕಾರ್ಯಕ್ರಮದಲ್ಲಿ ಎನ್ಎಸ್ಎಸ್ ನಾಯಕರಾದ ಕುಮಾರಿ ಮೇಘ ಕುಮಾರಿ ದಿವ್ಯ , ಸುಜನ್, ಸಾನ್ವಿತ್ ಉಪಸ್ಥಿತರಿದ್ದರು.