ಪುದುವೆಟ್ಟು: ಪುದುವೆಟ್ಟು ಗ್ರಾಮ ಪಂಚಾಯತ್‌ನ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆ ಫೆ.17ರಂದು ಗ್ರಾ.ಪಂ. ಪ್ರಭಾರ ಅಧ್ಯಕ್ಷ ಪೂರ್ಣಾಕ್ಷ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು. ಸಮಾಜ ಕಲ್ಯಾಣ ಇಲಾಖೆಯ ನಿಲಯ ಮೇಲ್ವಿಚಾರಕ ಧೀರಜ್ ಕುಮಾರ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದರು.
ಇಲಾಖಾಧಿಕಾರಿಗಳು ಗೈರು ಗ್ರಾಮಸ್ಥರು ಹೈರಾಣ:
ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಬಾಕಿ ಉಳಿದ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗೆ ಬರಬೇಕು ಅಲ್ಲಿಯವರೆಗೆ ಸಭೆ ನಡೆಯಲು ಬಿಡುವುದಿಲ್ಲ ಎಂದು ಸಭೆಯ ಪ್ರಾರಂಭದಲ್ಲಿ ಗ್ರಾಮಸ್ಥರು ಪಟ್ಟು ಹಿಡಿದರು. ಅಧಿಕಾರಿಗಳು ಕೂಡ ಕಾನೂನು ನನ್ನು ಪಾಲಿಸಬೇಕು. ಪುದುವೆಟ್ಟು ಗ್ರಾಮವನ್ನು ಅಧಿಕಾರಿಗಳು ಪದೇ ಪದೇ ನಿರ್ಲಕ್ಷ್ಯ ಧೋರಣೆ ಮಾಡುತ್ತಿದ್ದಾರೆ. ಪ್ರತಿ ಬಾರಿ ಕೊರಂ ಕೊರತೆ ಇರುತಿತ್ತು ಆದರೆ ಇಂದು ಅಧಿಕಾರಿಗಳು ಕೂಡ ಗೈರು ಆಗಿದ್ದಾರೆ ಅಷ್ಟೇ ಅಲ್ಲದೆ ಗ್ರಾಮಸ್ಥರು ಕೂಡ ಕ್ಷೀಣ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಗ್ರಾಮಸ್ಥರ್ರ್ರೋವರು ತಿಳಿಸಿದರು.
ಸಮಸ್ಯೆಯನ್ನು ಯಾರ ಬಳಿ ಕೇಳುವುದು:
ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಇರುವ ಕಾರಣ ಸಭೆಗೆ ಗೈರು ಹಾಜರಾಗಿದ್ದಾರೆ ಎಂದು ಪಿಡಿಓ ರವಿ ಬಸಪ್ಪ ಹೇಳಿದರು. ಅವರು ಸಭೆಗೆ ಹಾಜರಾಗಲು ಅನಾನುಕೂಲವಾಗುತ್ತದೆ ಎಂದು ತಹಶೀಲ್ದಾರ್ ಗ್ರಾ.ಪಂ.ಅಧ್ಯಕ್ಷರಿಗೆ ತಿಳಿಸಿದ್ದಾರೆ ಎಂದು ಪಿಡಿಓ ತಿಳಿಸಿದರು. ಸರ್ವೇ ನಂಬ್ರ 267ರ ಮಾಹಿತಿ ಬೇಕು ಈ ಬಗ್ಗೆ ಯಾರು ತಿಳಿಸುತ್ತಾರೆ ಎಂದು ಗ್ರಾಮಸ್ಥ ಕೇಳಿದರು. ಈ ಬಗ್ಗೆ ನೀವು ಲಿಖಿತ ರೂಪದಲ್ಲಿ ನೀಡಿ ಅಥವಾ ನಿಮ್ಮ ಪ್ರಶ್ನೆಯನ್ನು ತಿಳಿಸಿ ಪಿಡಿಓ ಸಂಬಂಧಪಟ್ಟವರಿಗೆ ತಿಳಿಸುತ್ತಾರೆ ಎಂದು ಮಾರ್ಗದರ್ಶಿ ಅಧಿಕಾರಿ ಧೀರಜ್ ಹೇಳಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮ ಸಭೆಗೆ ಹಾಜರಾಗುತ್ತಾರೆ ಎಂದು ಮಾಹಿತಿ ನೀಡಿದರು. ಪೊಲೀಸ್ , ಪಶು ಸಂಗೋಪನಾ, ಮೆಸ್ಕಾಂ, ಆರೋಗ್ಯ , ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ಸದಸ್ಯರಾದ ಭಾಸ್ಕರ, ಯಶವಂತ ಗೌಡ ಡೆಚ್ಚಾರು , ಅಪ್ಪಿ, ರೇಣುಕಾ, ವನಿತಾ ಹಾಗೂ ಇಂದಿರಾ, ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಿಡಿಓ ರವಿ ಬಸಪ್ಪ ಸ್ವಾಗತಿಸಿದರು.