ಬೆಳ್ತಂಗಡಿ: ಇಲ್ಲಿಯ ವೈಭವ್ ಆರ್ಕೆಡ್ ನಲ್ಲಿ ಕೋಟಕ್ ಲೈಫ್ ಆಫೀಸ್ ಉದ್ಘಾಟನೆಗೊಂಡು 1 ವರ್ಷ ಪೂರೈಸಿ 2ನೇ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದ ಸಂಭ್ರಮಾಚರಣೆಯನ್ನು ಕೋಟಕ್ ಲೈಫ್ ಏರ್ಯ ಹೆಡ್ ಮೈಕಲ್ ಡಿಸೋಜ ರವರು ದೀಪ ಪ್ರಜ್ವಲನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿ ಬೆಳ್ತಂಗಡಿ ಬ್ರಾಂಚ್ ಜನತೆಗೆ ಒಂದು ವರ್ಷದಲ್ಲಿ ರೂ. 55 ಕೋಟಿ ಆರ್ಥಿಕ ಭದ್ರತೆ ನೀಡಿದೆ ಇದು ಬ್ರಾಂಚ್ ವ್ಯಾಪ್ತಿಯ ಸಾಧನೆಯಲ್ಲಿ ದೇಶದಲ್ಲಿ 4 ನೇ ಸ್ಥಾನ ರಾಜ್ಯದಲ್ಲಿ 2 ನೇ ಸ್ಥಾನ ಪಡೆದು 2ನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ. ಮುಂದಿನ ವರ್ಷದಲ್ಲಿ ಬೆಳ್ತಂಗಡಿ ಕೋಟಕ್ ಲೈಫ್ ದೇಶದಲ್ಲೇ ಅತ್ಯುನ್ನತ ಸ್ಥಾನದಲ್ಲಿ ಗುರುತಿಸುವಂತಾಗಲಿ ಎಂದು ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಕೋಟಕ್ ಲೈಫ್ ಮಂಗಳೂರು ಚೀಫ್ ಎಜೇಂನ್ಸಿ ಪಾಲುದಾರರಾದ ಪದ್ಮ ಬೆಳಚಡ ಹಾಗೂ ಸೀನಿಯರ್ ಎಜೇಂನ್ಸಿ ಪಾಲುದಾರ ಚಂದ್ರಶೇಖರ್ ರವರುಗಳು ಮಾತನಾಡಿ ಮುಂದಿನ ದಿನಗಳಲ್ಲೂ ಜನತೆಗೆ ಆರ್ಥಿಕ ಭದ್ರತೆ ಒದಗಿಸುವಲ್ಲಿ ಬೆಳ್ತಂಗಡಿ ಬ್ರಾಂಚ್ ಮುಂಚೂಣಿಯಲ್ಲಿ ಗುರುತಿಸುವಂತಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ, ಕಡಬ, ಪುತ್ತೂರು ಬ್ರಾಂಚ್ ಮ್ಯಾನೇಜರ್ ಗಳು ಪ್ರಜ್ವಲ್ ಅಡೂರ್, ದುರ್ಗಾಪ್ರಸಾದ್, ರವಿ ಆಚಾರ್ಯ, ಚೀಫ್ ಎಜೇಂನ್ಸಿ ಪಾಲುದಾರರಾದ ದಿನಕರ್ ಕೆ., ಗಿರೀಶ್ ಬಿ. ಜಿ., ಸೀನಿಯರ್ ಎಜೇಂನ್ಸಿ ಪಾಲದಾರರಾದ ಅನಿತಾ ಪ್ರದೀಪ್ ಶೆಟ್ಟಿ, ಯೋಗೀಶ್ ಆಳಂಬಿಲ ಕೊಕ್ಕಡ, ಬೆಳ್ತಂಗಡಿ, ಕಡಬ., ಪುತ್ತೂರು, ಮಡಿಕೇರಿ ಬ್ರಾಂಚ್ ಏಜೇಂನ್ಸಿ ಪಾಲುದಾರರು, ಸಿಬ್ಬಂದಿಗಳು ಉಪಸ್ಥಿತರಿದ್ದರು.