ಬೆಳ್ತಂಗಡಿ: ಮೈಸೂರಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧಾಕೂಟದಲ್ಲಿ ಬ್ರಹ್ಮಾವರ ನಿರ್ಮಲ ಸ್ಕೂಲಿನ 6ನೇ ತರಗತಿಯ ವಿದ್ಯಾರ್ಥಿ ಮೊಹಮ್ಮದ್ ಅಫ್ಹಾನ್ ಇವರು ಸ್ಪರ್ಧಾಕೂಟದಲ್ಲಿ ಭಾಗವಹಿಸಿ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕ ಪಡೆದುಕೊಂಡಿರುತ್ತಾರೆ.


ಇವರು ಉಜಿರೆ ಕ್ಯೂಟಿಎಫ್ ಫ್ಯಾಮಿಲಿಯ ಅಕ್ಬರ್ ಅಲಿ, ಶಂಶಾದ್ ಎನ್. ಜಿ, ದಂಪತಿಯ ಪುತ್ರರಾಗಿರುತ್ತಾರೆ. ಕರ್ನಾಟಕದ ಪ್ರಸಿದ್ಧ ಸಂಸ್ಥೆಯಾದ ಬುಡಕನ್ ಕರಾಟೆ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ಸಂಸ್ಥೆಯ ಮುಖ್ಯ ಶಿಕ್ಷಕರಾದ ವಾಮನ್ ಪಾಲನ್ ಇವರಲ್ಲಿ ಕರಾಟೆ ತರಬೇತಿಯನ್ನು ಪಡೆದುಕೊಂಡಿರುತ್ತಾರೆ.