ನಾವರ : ದೇಯಿ ಬೈದೆದಿ ಕೋಟಿ ಚೆನ್ನಯ ಮೂಲ ಸ್ಥಾನ ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಮಾ. 1 ರಿಂದ ಮಾ. 5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಯಶಸ್ಸುಗೊಳಿಸುವ ಬಗ್ಗೆ ಬೆಳ್ತಂಗಡಿ ತಾಲೂಕಿನ ನಾವರ ಕುದ್ಯಾಡಿ ಗ್ರಾಮಗಳ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಭಕ್ತಾಭಿಮಾನಿಗಳ ಸಮಾಲೋಚನ ಸಭೆಯನ್ನು ಫೆ. 16 ರಂದು ನಾವರ ಗ್ರಾಮದ ಹಿರಂತೊಟ್ಟು ಗುತ್ತು ರತ್ನಾಕರ ಪೂಜಾರಿಯವರ ಮನೆಯಲ್ಲಿ ಆಯೋಜಿಸಲಾಗಿತ್ತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಶ್ರೀ ಗುರುನಾರಾಯಣ ಸೇವಾ ಸಂಘ (ರಿ) ಬೆಳ್ತಂಗಡಿ ಇದರ ಮಾಜಿ ಅಧ್ಯಕ್ಷ ಶ್ರೀ ಕ್ಷೇತ್ರ ಗೆಜ್ಜಗಿರಿ ಇಲ್ಲಿನ ಗೌರವಾಧ್ಯಕ್ಷ ಬಿ ಪೀತಾಂಬರ ಹೆರಾಜೆಯವರು ಕ್ಷೇತ್ರದ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶ್ರೀ ಕ್ಷೇತ್ರ ನಡೆದು ಬಂದ ಹಾದಿಯನ್ನು ಸಭೆಗೆ ವಿವರಿಸಿ ಶ್ರೀ ಕ್ಷೇತ್ರದಲ್ಲಿ ನಡೆಯುವ ಮಡಿಲು ಸೇವೆ ಹಾಗೂ ಉತ್ಸವದ ಮಾಹಿತಿಯನ್ನು ಸಭೆಗೆ ನೀಡಿ ತಾಲೂಕಿನ ಎಲ್ಲಾ ಭಕ್ತಾಭಿಮಾನಿಗಳನ್ನು ಜಾತ್ರೋತ್ಸವಕ್ಕೆ ಆಮಂತ್ರಿಸಿದರು.
ಶ್ರೀ ಗುರು ನಾರಾಯಣ ಸೇವಾ ಸಂಘ ಬೆಳ್ತಂಗಡಿ ಇಲ್ಲಿನ ಮಾಜಿ ಅಧ್ಯಕ್ಷ ಜಯರಾಮ ಬಂಗೇರ ಹೆರಾಜೆ , ನಾರಾವಿ ವಲಯ ಸಂಚಾಲಕ ಸುಲ್ಕೇರಿ ಗುರು ನಾರಾಯಣ ಸಂಘದ ಅಧ್ಯಕ್ಷ ಕೊರಗಪ್ಪ ಪೂಜಾರಿ , ಶ್ರೀ ಗುರುನಾರಾಯಣ ಸೇವಾ ಸಂಘ ಕುದ್ಯಾಡಿ ಇದರ ಅಧ್ಯಕ್ಷ ವಿಶ್ವನಾಥ ಪೂಜಾರಿ ಕುದ್ಯಾಡಿ ಗುತ್ತು , ರತ್ನಾಕರ ಪೂಜಾರಿ ಹಿರಂತೊಟ್ಟು,ಗ್ರಾಮ ಪಂಚಾಯತ್ ಸದಸ್ಯರಾದ ರವಿ ಪೂಜಾರಿ ಹಾರಡ್ಡೆ, ನಾವರ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ಆಡಳಿತ ಸಮಿತಿಯ ಸದಸ್ಯರಾದ ಶೇಖರ ಪೂಜಾರಿ ಬರಮೇಲು, ರಮಾನಾಥ ಪೂಜಾರಿ ಪಾದೆಮಾರಡ್ಡ, ಶ್ರೀಮತಿ ಭಾರತಿ ನಾರಾಯಣ, ರಮೇಶ್ ಪೂಜಾರಿ ಕೊರಲ್ಲ , ಶಿಕ್ಷಕರಾದ ಶೇಖರ ಎನ್ ಅಲೆಕ್ಕಿ, ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ಕೇಶವತಿ, ಪುಷ್ಪ ಹಿರನ್ತೊಟ್ಟು ,ಸುಪ್ರಿಯಾ ಕೊರಲ್ಲ, ಚಂದ್ರಶೇಖರ್ ಕೋಟ್ಯಾನ್, ರಾಮಚಂದ್ರ ಪೂಜಾರಿ, ಯುವಶಕ್ತಿ ಬಳಗದ ಸುರಕ್ಷಿತ್ ಪೂಜಾರಿ, ಪ್ರಶಾಂತ್ ಹಿಮರಡ್ಡ, ಶೋಭಾ ಜಾಲ, ಬೇಬಿ, ಭಾರತಿ , ಶ್ರೀಮತಿ ವಿಜಯ ಮೇಲಿನ ಪಲಿಕೆ,ವಸಂತಿ,ಜಯಂತಿ , ಪ್ರಭಾಕರ ಹಿರಂತೊಟ್ಟು,ದಿವಾಕರ ಪೆರಡಾಲು, ಸುದರ್ಶನ್, ಯೋಗೀಶ್ ಹೀರಂತೊಟ್ಟು,ಹಾಗೂ ನಾವರ ಕುಧ್ಯಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಶ್ರೀ ಕ್ಷೇತ್ರ ಗೆಜ್ಜಗಿರಿ ಜಾತ್ರೋತ್ಸವ ಸಮಿತಿ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ರವರು ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಭಾರತಿ ರತ್ನಾಕರ ಧನ್ಯವಾದ ಸಮರ್ಪಿಸಿದರು.