
ಬೆಳ್ತಂಗಡಿ : ರಾಮನೇ ನಮ್ಮ ದೇಶ , ರಾಮನೇ ನಮ್ಮ ಧರ್ಮ, ರಾಮನೇ ನಮ್ಮ ಸಂಸ್ಕೃತಿ, ರಾಮನೇ ನಮ್ಮ ಧೈರ್ಯ ರಾಮನೇ ನಮ್ಮ ಪರಾಕ್ರಮ, ರಾಮನೇ ನಮ್ಮ ಸರ್ವಸ್ವ, ರಾಮನೇ ನಮ್ಮ ಅಸ್ತಿತ್ವ, ಸಮಾಜದ ಯಾವುದೇ ಮುಖದಲ್ಲಿ ನೋಡಿದರೂ ಶ್ರೀರಾಮಚಂದ್ರ ಸರ್ವ ಶ್ರೇಷ್ಠ ಎಂದು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು.

ಅವರು ಮೊಗ್ರು ಗ್ರಾಮದ ಅಲೆಕ್ಕಿ-ಮುಗೇರಡ್ಕ ಜೈ ಶ್ರೀ ರಾಮ್ ಫ್ರೆಂಡ್ಸ್ ಕ್ಲಬ್ (ರಿ.) ಇದರ ಬೆಳ್ಳಿಹಬ್ಬದ ಸವಿ ನೆನಪಿಗಾಗಿ ಇಲ್ಲಿನ ಶ್ರೀ ರಾಮ ಶಿಶುಮಂದಿರ ವಠಾರದಲ್ಲಿ ಫೆ15ರಂದು ನೆರವೇರಿದ ‘ರಜತ ಪಥ’ ಸಭಾಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಶಾಸಕ ಹರೀಶ್ ಪೂಂಜ ಜೈ ಶ್ರೀರಾಮ್ ಫ್ರೆಂಡ್ಸ್ ಕ್ಲಬ್ ನ ಯುವಕರು ಸತತ ಇಪ್ಪತ್ತೈದು ವರ್ಷಗಳಿಂದ ಊರಿನ ಒಳಿತಿಗಾಗಿ ಸತ್ಕಾರ್ಯಗಳಲ್ಲಿ ತೊಡಗಿದ್ದಾರೆ, ಉತ್ತಮ ಚಿಂತನೆಯೊಂದಿಗೆ ಹಿಂದೂ ಸಮಾಜದ ಆಶಯದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅಭಿನಂದನೀಯ ಎಂದರು.
ಬೆಂಗಳೂರು ಯುವ ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದ.ಕ. ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾ| ಬ್ರಿಜೇಶ್ ಚೌಟ, ಶಶಿಧರ ಶೆಟ್ಟಿ, ನವಶಕ್ತಿ, ಗುರುವಾಯನಕೆರೆ, ಮೋಹನ್ ಕುಮಾರ್, ಲಕ್ಷ್ಮೀ ಇಂಡಸ್ಟ್ರೀಸ್, ಉಜಿರೆ, ಸಭಾ ಕಾರ್ಯಕ್ರಮದ ಮುಂಚೆಯೇ ಬಂದು ಶುಭ ಹಾರೈಸಿದರು.
ಉಪ್ಪಿನಂಗಡಿ ಶ್ರೀ ರಾಮ ಶಾಲೆ ಸಂಚಾಲಕರಾದ ಯು, ಜಿ. ರಾಧ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ, ಮುಗೇರಡ್ಕ ದೇವಸ್ಥಾನದ ಅಡಳಿತ ಮೋಕ್ತೇಸರಾದ ದೇವಸ್ಯ ಗುತ್ತು ರಾಮಣ್ಣ ಗೌಡ,ಪದ್ಮುಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿಕಟ ಪೂರ್ವ ಅಧ್ಯಕ್ಷ ರಕ್ಷೀತ್ ಪಣೇಕ್ಕರ, ಮುಗೇರಡ್ಕ ದೈವಸ್ಥಾನ ಆಡಳಿತ ಮೋಕ್ತೇಸರರು, ಮನೋಹರ ಗೌಡ ಅಂತರ,ಪ್ರಗತಿಪರ ಕೃಷಿಕ ದೇವಿಪ್ರಸಾದ್, ಕಡಮ್ಮಾಜೆ, ಬಂದಾರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಂಗಾಧರ ಪೂಜಾರಿ, ಕ್ಲಬ್‌ನ ಗೌರವಾಧ್ಯಕ್ಷ ಉದಯ ಭಟ್ ಅಲೆಕ್ಕಿ, ಅಧ್ಯಕ್ಷ ರಮೇಶ್ ಎನ್, ಭರತೇಶ್ ಪಿ. ಅಧ್ಯಕ್ಷ ಬೆಳ್ಳಿಹಬ್ಬ ಸಮಿತಿ ಅಧ್ಯಕ್ಷ ಭರತೇಶ್ ಪಿ. ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದ ಸಾಧಕರನ್ನು ಗೌರವಿಸಲಾಯಿತು.
ಶಿಕ್ಷಕ ಮಾಧವ ಗೌಡ ದೊರ್ತೋಡಿ ಸ್ವಾಗತಿಸಿ,ಸತೀಶ್ ಹೊಸ್ಕಾರ್ ನಿರೂಪಿಸಿದರು. ಭರತೇಶ್ ಪಿ.ವಂದಿಸಿದರು. ಸಮಿತಿಯ ಪದಾಧಿಕಾರಿಗಳು ಸದಸ್ಯರು ಭಾಗವಹಿಸಿದರು.