21 C
ಪುತ್ತೂರು, ಬೆಳ್ತಂಗಡಿ
February 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಫೆ.22: ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ “ಕುಂಬಾ ಸಮಾಗಮ” ; ವಿವಿಧ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ವಜಾತಿ ಬಾಂಧವರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ

ಬೆಳ್ತಂಗಡಿ: ಭಾರತದ ವೈವಿಧ್ಯಮಯ ವಿವಿಧ ಪಂಗಡಗಳಲ್ಲಿ ಕುಂಬಾರ ಸಮುದಾಯವು ಅಗ್ರಸ್ಥಾನದಲ್ಲಿದೆ. ಮೂಲತ: ಮಣ್ಣಿನ ಮಕ್ಕಳಾದ ಕುಂಬಾರರ ಬಗ್ಗೆ ನಮ್ಮ ಪುರಾತನ ಕಾವ್ಯಗಳಲ್ಲಿ ಅನೇಕ ಉಲ್ಲೇಖವಿದೆ. ಭಾರತೀಯ ಸಂಸ್ಕೃತಿಗೆ ಸಂಪ್ರದಾಯ ಆಚಾರ ವಿಚಾರಕ್ಕೆ ಕುಂಬಾರ ಸಮುದಾಯ ತನ್ನದೆ ಆದ ಅನೇಕ ಕೊಡುಗೆಗಳನ್ನು ನೀಡಿದೆ. ನಾಗರೀಕ ಸಮಾಜಕ್ಕೆ ಆಹಾರ ಬೇಯಿಸಿ ತಿನ್ನಲು ಬೇಕಾಗುವ ಮಡಿಕೆ-ಕುಡಿಕೆಗಳನ್ನು ನೀಡಿರುವ ಹೆಗ್ಗಳಿಕೆ ಕುಂಬಾರ ಸಮುದಾಯದಾಗಿರುತ್ತದೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಬೇರೆ ಬೇರೆ ಹೆಸರುಗಳಿಂದ ಗುರುತಿಸಿಕೊಂಡಿರುವ ಕುಂಬಾರ ಸಮುದಾಯ ಧಾರ್ಮಿಕ, ಅಧ್ಯಾತ್ಮಿಕ, ಸಾಂಸ್ಕೃತಿಕ ಹಿನ್ನಲೆಯನ್ನು ಹೊಂದಿದೆ. ಅತ್ಯಂತ ಕಷ್ಟ, ಸಹಿಷ್ಣು ಪ್ರಾಮಾಣಿಕವಾಗಿ ಬದುಕಿಕೊಂಡು ಬಂದಿರುವ ಈ ಸಮುದಾಯದ ಜನರ ಪರಿಶ್ರಮಿಗಳು ಮೃದು ಸ್ವಭಾವದವರು ಹಾಗೂ ತಮ್ಮ ಕಟ್ಟುಪಾಡು ಆಚಾರ-ವಿಚಾರ ಸಂಪ್ರದಾಯವನ್ನು ಪಾಲಿಸಿಗೊಂಡು ಬರುವಲ್ಲಿ ಬದ್ದರು ಎಂದು ಸಮಾವೇಶ ಮತ್ತು ಕ್ರೀಡಾಕೂಟ ಕಾರ್ಯಧ್ಯಕ್ಷರು ವಕೀಲರಾದ ಉದಯ ಬಿ.ಕೆ ಹೇಳಿದರು.

ಅವರು ಫೆ.18ರಂದು ಬೆಳ್ತಂಗಡಿ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕುಂಬಾರ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ಹಾಗೂ ಕುಂಬಾರ ಸಮುದಾಯದ ಮೂಲ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಉದ್ದೇಶ ಹಾಗೂ ಸಮುದಾಯದ ಜನರಿಗೆ ವಿವಿಧ ವಿಷಯಗಳಲ್ಲಿ ಜಾಗೃತಿ ಮೂಡಿಸುವ ಧ್ಯೆಯದೊಂದಿಗೆ ಕುಂಬಾರರಿಗೆ ರಾಜಕೀಯ ಸ್ಥಾನಮಾನ ಕುಲವೃತ್ತಿ ಕುಂಬಾರಿಕೆಯನ್ನು ಉಳಿಸಿ ಬೆಳೆಸಲು ಸರಕಾರದಿಂದ ವಿಶೇಷ ಸೌಲಭ್ಯಕ್ಕೆ ಒತ್ತಾಯಿಸಿ ದ.ಕ ಜಿಲ್ಲಾ ಮಾಗಣೆ ಮಟ್ಟದ ಕುಂಬಾರರ ಬೃಹತ್ ಸಮಾವೇಶ “ಕುಂಬಾ ಸಮಾಗಮ” ಸಮಾಜದ ವಿವಿಧ ಸಾಧಕರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸ್ವಜಾತಿ ಬಾಂಧವರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಕಾರ್ಯಕ್ರಮವು ಬಂದಾರು ಶ್ರೀ ರಾಮನಗರ ಶಿವಪ್ರಿಯ ಮೈದಾನದಲ್ಲಿ ಫೆ.22 ರಂದು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಕುಂಬಾರರ ಮಹಾ ಸಂಘದ ರಾಜ್ಯಾಧ್ಯಕ್ಷ ಶಿವಕುಮಾರ್ ಚೌಟ ಶೆಟ್ಟಿ ಮಾಡಲಿದ್ದು ಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಪೂಂಜಾ, ಸಂಸದರಾದ ಬ್ರಿಜೇಶ್ ಚೌಟ, ಎಮ್.ಎಲ್.ಸಿ ಕಿಶೋರ್ ಕುಮಾರ್, ರಾಜೀವ ಗಾಂಧಿ ವಿ.ವಿ ಸೆನೆಟ್ ಸದಸ್ಯರಾದ ಶ್ರೀನಿವಾಸ ಮೇಲು, ಸಮುದಾಯದ ನಾಯಕರಾದ ಡಾ|| ಅಣ್ಣಯ್ಯ ಕುಲಾಲ್, ಪದ್ಮಕುಮಾರ್, ಬಾಸ್ಕರ ಪೆರುವಾಯಿ, ಉದ್ಯಮಿ ಕಿರಣ್ ಚಂದ್ರ, ಹರೀಶ್ ಕಾರಿಂಜ ಹಾಗೂ ಕುಂಬಾರ ಸಮುದಾಯದ ವಿವಿಧ ಗುರಿಕಾರರು ನಾಯಕರುಗಳು, ಕಾರ್ಯಕರ್ತರು ಭಾಗವಹಿಸಲಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬಂದಾರು ಕುಂಬಾರರ ಸೇವಾ ಸಂಘದ ಅಧ್ಯಕ್ಷ ಕೆಂಚಪ್ಪ ಕುಂಬಾರ, ಕಾರ್ಯದರ್ಶಿ ಮಾಜಿ ಅಧ್ಯಕ್ಷ ರಮೇಶ್ ಕುಂಬಾರ, ಉಪಸ್ಥಿತರಿದ್ದರು.

ಕಾರ್ಯದರ್ಶಿ ಪ್ರಕಾಶ್ ಕೆ ಸ್ವಾಗತಿಸಿ, ಜೈ ಶ್ರೀರಾಮ ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಶೇಖರ ಬಿ.ಕೆ ಧನ್ಯವಾದವಿತ್ತರು.

Related posts

ಪಶ್ಚಿಮಘಟ್ಟಗಳ ಸಾಲಿನ ಪ್ರವಾಸಿ ತಾಣಗಳು 6 ದಿನಗಳ ಕಾಲ ನಿರ್ಬಂಧ

Suddi Udaya

ಬಳಂಜ‌ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಯುವ ಸಾಧಕಿ ಮಾನ್ಯರವರಿಗೆ ಸನ್ಮಾನ

Suddi Udaya

ಕಸ್ತೂರಿ ರಂಗನ್ ವರದಿಯ ವಿರುದ್ಧ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಬೆಳ್ತಂಗಡಿ ರೈತ ಮೋರ್ಚಾ ಬೆಂಬಲ

Suddi Udaya

ಜ. 20 : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಸಭಾಂಗಣದಲ್ಲಿ ಯುವ ನಿಧಿ ನೋಂದಣಿ ಶಿಬಿರ

Suddi Udaya

ಮೂರು ತಿಂಗಳ ಹಿಂದೆ ಗೇರುಕಟ್ಟೆ ಕೆರೆಯಲ್ಲಿ ಸಿಕ್ಕ ಶವದ ಗುರುತು ಪತ್ತೆ: ಮೃತಪಟ್ಟವರು ಗೇರುಕಟ್ಟೆಯ ಉಮರ್ ಫಾರೂಕ್ ಡಿಎನ್‌ಎ ವರದಿಯಲ್ಲಿ ದೃಢ

Suddi Udaya

ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಘಟಕದ ವತಿಯಿಂದ ಗಾಂಧಿ ಜಯಂತಿ ಆಚರಣೆ

Suddi Udaya
error: Content is protected !!