ನಿಡ್ಲೆ: ಬರೆಂಗಾಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಲಿಕಾ ಹಬ್ಬವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಮ್ ಸಿ ಯ ಅಧ್ಯಕ್ಷ ರುಕ್ಮಯ ಪೂಜಾರಿ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಂಜನ್ ಹೆಬ್ಬಾರ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಕ್ಷೇತ್ರ ಸಮನ್ವಯ ಅಧಿಕಾರಿ ಬಸವಲಿಂಗಪ್ಪ, ಬೆಳ್ತಂಗಡಿ ಪ್ರೌಢಶಾಲಾ ವಿಭಾಗ ಶಿಕ್ಷಣ ಸಂಯೋಜಕರು ಶ್ರೀಮತಿ ಚೇತನಾಕ್ಷಿ, ನಿಡ್ಲೆ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪ್ರತಿಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಧಾನ ಕಾರ್ಯದರ್ಶಿ ಸುರೇಶ್ ಮಾಚಾರ್ , ಉಪಾಧ್ಯಕ್ಷರು ಶ್ರೀಮತಿ ಐರನ್ ಡೇಸ, ಸಹ ಕಾರ್ಯದರ್ಶಿ ಶ್ರೀಮತಿ ಜ್ಯೋತಿ, ಕಳೆಂಜ ಶಾಲೆ ಮುಖ್ಯ ಗುರುಗಳಾದ ಕೃಷ್ಣಪ್ಪ ಟಿ, ದೊಂಪದ ಪಲ್ಕೆ ಮುಖ್ಯ ಗುರುಗಳಾದ ಸುರೇಶ ಆಚಾರ್ , ಗುರಿಪಳ್ಳ ಶಾಲೆ ಶಿಕ್ಷಕಿ ಶ್ರೀಮತಿ ಮಂಜುಳಾ ಜೆಟಿ ಹಾಗೂ ಬರಂಗಾಯ ಶಾಲೆ ಮುಖ್ಯ ಶಿಕ್ಷಕ ಗೋಪಾಲ್ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಮೆರವಣಿಗೆಯ ಮುಖಾಂತರವಾಗಿ ಮಕ್ಕಳನ್ನು ಕರೆದುಕೊಂಡು ಬಂದು ಸ್ವಾಗತಿಸಲಾಯಿತು. ಶ್ರೀಮತಿ ಪ್ರತಿಮ ಪ್ರಸ್ತಾವಿಕವಾಗಿ ಕಲಿಕಾ ಹಬ್ಬದ ಕುರಿತಾಗಿ ಮಾತನಾಡಿದರು. ಬಸವಲಿಂಗಪ್ಪ ಕ್ಷೇತ್ರ ಸಮನ್ವಯ ಅಧಿಕಾರಿಗಳು ಕಲಿಕಾ ಹಬ್ಬದ ಚಟುವಟಿಕೆಗಳ ಪ್ರಯೋಜನವನ್ನು ತಾವುಗಳು ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು. ನಂತರದಲ್ಲಿ ಎಫ್‌ಎಲ್‌ಎನ್ ಮಕ್ಕಳ ಕಲಿಕಾ ಚಟುವಟಿಕೆಗಳಿಗೆ ಕೊಠಡಿಗಳಿಗೆ ತೆರಳಲಾಯಿತು. ಗಟ್ಟಿ ಓದು, ರಸಪ್ರಶ್ನೆ, ಕಥೆ ಹೇಳುವುದು, ನಿಧಿಶೋದನೆ ಜ್ಞಾಪಕ ಶಕ್ತಿ, ಮೋಜಿನ ಗಣಿತ, ಪೋಷಕರೊಂದಿಗೆ ಸಂವಾದ, ಕೈಬರಹ ಮತ್ತು ಕ್ಯಾಲಿಗ್ರಫಿ ಮುಂತಾದ ಚಟುವಟಿಕೆಗಳನ್ನು ಚಟುವಟಿಕೆಗಳ ಮೂಲಕ ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಟ್ಟರು.
ಸಮಾರೋಪ ಸಮಾರಂಭ ಎಸ್ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ಆಶಾಲತಾ ಅಧ್ಯಕ್ಷತೆಯಲ್ಲಿ ನಡೆಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಹೆಬ್ಬಾರ್ ವಿತರಿಸಿದರು.