ಬೆಳ್ತಂಗಡಿ: ಇಳಂತಿಲ ಗ್ರಾಮದ ಪೆದಮಲೆ ಕುಟ್ಟಿಕಳ ಅಜಿಲಮೊಗರು ನಾವೂರು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಅನುದಾನ ಒದಗಿಸುವಂತೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ರವರಿಗೆ ಕೆ.ಪಿ.ಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಮನವಿ ನೀಡಿದರು.
ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಇಳಂತಿಲ ಗ್ರಾಮದ ಪೆದಮಲೆ ಕುಟ್ಟಿಕಳ ಅಜಿಲಮೊಗರು ನಾವೂರು 12 ಕಿಲೋಮೀಟರ್ ರಸ್ತೆಯು ತೀರ ಹದಗೆಟ್ಟಿದ್ದು ವಾಹನ ಸಂಚಾರಕ್ಕೆ ತುಂಬಾ ತೊಂದರೆಯಾಗುತ್ತಿದೆ.ಮತ್ತು ಈ ರಸ್ತೆಯು ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳನ್ನು ಸಂಪರ್ಕಿಸುವ ರಸ್ತೆಯಾಗಿದೆ ಎಂದು ಮನವಿಯಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ತೆಕ್ಕರು ಸಹಕಾರಿ ಸಂಘದ ಅಧ್ಯಕ್ಷ ಅಬ್ದುಲ್ ರಜಾಕ್, ಕೆ. ಕೆ ಸಾಹುಲ್ ಅಮೀದ್, ಜಯ ವಿಕ್ರಂ, ಇಸುಬು ಇಲಂತಿಲ, ಬಾಲಕೃಷ್ಣ ಶೆಟ್ಟಿ, ಅಯೂಬ್ ಉಪಸ್ಥಿತರಿದ್ದರು.