22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬರೆಂಗಾಯ ಸ.ಉ. ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬ

ನಿಡ್ಲೆ: ಬರೆಂಗಾಯ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಕಲಿಕಾ ಹಬ್ಬವನ್ನು ನಡೆಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಮ್ ಸಿ ಯ ಅಧ್ಯಕ್ಷ ರುಕ್ಮಯ ಪೂಜಾರಿ ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಜ್ಯೋತಿ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಂಜನ್ ಹೆಬ್ಬಾರ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ಕ್ಷೇತ್ರ ಸಮನ್ವಯ ಅಧಿಕಾರಿ ಬಸವಲಿಂಗಪ್ಪ, ಬೆಳ್ತಂಗಡಿ ಪ್ರೌಢಶಾಲಾ ವಿಭಾಗ ಶಿಕ್ಷಣ ಸಂಯೋಜಕರು ಶ್ರೀಮತಿ ಚೇತನಾಕ್ಷಿ, ನಿಡ್ಲೆ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಪ್ರತಿಮಾ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಪ್ರಧಾನ ಕಾರ್ಯದರ್ಶಿ ಸುರೇಶ್ ಮಾಚಾರ್ , ಉಪಾಧ್ಯಕ್ಷರು ಶ್ರೀಮತಿ ಐರನ್ ಡೇಸ, ಸಹ ಕಾರ್ಯದರ್ಶಿ ಶ್ರೀಮತಿ ಜ್ಯೋತಿ, ಕಳೆಂಜ ಶಾಲೆ ಮುಖ್ಯ ಗುರುಗಳಾದ ಕೃಷ್ಣಪ್ಪ ಟಿ, ದೊಂಪದ ಪಲ್ಕೆ ಮುಖ್ಯ ಗುರುಗಳಾದ ಸುರೇಶ ಆಚಾರ್ , ಗುರಿಪಳ್ಳ ಶಾಲೆ ಶಿಕ್ಷಕಿ ಶ್ರೀಮತಿ ಮಂಜುಳಾ ಜೆಟಿ ಹಾಗೂ ಬರಂಗಾಯ ಶಾಲೆ ಮುಖ್ಯ ಶಿಕ್ಷಕ ಗೋಪಾಲ್ ಭಾಗವಹಿಸಿದ್ದರು.

ಕಾರ್ಯಕ್ರಮವನ್ನು ಮೆರವಣಿಗೆಯ ಮುಖಾಂತರವಾಗಿ ಮಕ್ಕಳನ್ನು ಕರೆದುಕೊಂಡು ಬಂದು ಸ್ವಾಗತಿಸಲಾಯಿತು. ಶ್ರೀಮತಿ ಪ್ರತಿಮ ಪ್ರಸ್ತಾವಿಕವಾಗಿ ಕಲಿಕಾ ಹಬ್ಬದ ಕುರಿತಾಗಿ ಮಾತನಾಡಿದರು. ಬಸವಲಿಂಗಪ್ಪ ಕ್ಷೇತ್ರ ಸಮನ್ವಯ ಅಧಿಕಾರಿಗಳು ಕಲಿಕಾ ಹಬ್ಬದ ಚಟುವಟಿಕೆಗಳ ಪ್ರಯೋಜನವನ್ನು ತಾವುಗಳು ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು. ನಂತರದಲ್ಲಿ ಎಫ್‌ಎಲ್‌ಎನ್ ಮಕ್ಕಳ ಕಲಿಕಾ ಚಟುವಟಿಕೆಗಳಿಗೆ ಕೊಠಡಿಗಳಿಗೆ ತೆರಳಲಾಯಿತು. ಗಟ್ಟಿ ಓದು, ರಸಪ್ರಶ್ನೆ, ಕಥೆ ಹೇಳುವುದು, ನಿಧಿಶೋದನೆ ಜ್ಞಾಪಕ ಶಕ್ತಿ, ಮೋಜಿನ ಗಣಿತ, ಪೋಷಕರೊಂದಿಗೆ ಸಂವಾದ, ಕೈಬರಹ ಮತ್ತು ಕ್ಯಾಲಿಗ್ರಫಿ ಮುಂತಾದ ಚಟುವಟಿಕೆಗಳನ್ನು ಚಟುವಟಿಕೆಗಳ ಮೂಲಕ ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಟ್ಟರು.

ಸಮಾರೋಪ ಸಮಾರಂಭ ಎಸ್ಡಿಎಂಸಿ ಉಪಾಧ್ಯಕ್ಷೆ ಶ್ರೀಮತಿ ಆಶಾಲತಾ ಅಧ್ಯಕ್ಷತೆಯಲ್ಲಿ ನಡೆಯಿತು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಹೆಬ್ಬಾರ್ ವಿತರಿಸಿದರು.

Related posts

ಎಸ್ .ಡಿ.ಎಂ. ಶಿಕ್ಷಣ ಸಂಸ್ಥೆ ವತಿಯಿಂದ ಚಾಲಕರಿಗೆ ಕಾರ್ಯಾಗಾರ

Suddi Udaya

ಮೇಲಂತಬೆಟ್ಟು: ಪಾಲೆತ್ತಡಿಗುತ್ತು ದೈವಗಳ ಧರ್ಮಚಾವಡಿ, ಭಂಡಾರದ ಮನೆ (ತರವಾಡು) ಪುನಃ ನಿರ್ಮಾಣದ ಶಂಕುಸ್ಥಾಪನೆ

Suddi Udaya

ಕೊಕ್ರಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭ ಪ್ರತಿಭಾ ದಿನ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಳ್ಳಾರಿ ಜನಾರ್ದನ ರೆಡ್ಡಿ ಭೇಟಿ

Suddi Udaya

ಸ್ತುತಿರವರ ಹುಟ್ಟುಹಬ್ಬದ ಪ್ರಯುಕ್ತ ಉರುಂಬಿದೊಟ್ಟು ಅಂಗನವಾಡಿಯ ಸುತ್ತ ಗಿಡಗಂಟಿಗಳ ಸ್ವಚ್ಛತೆ ಹಾಗೂ ತೆಂಗಿನ ಗಿಡ ನೆಡುವ ಮೂಲಕ ಆಚರಣೆ

Suddi Udaya

ಇಂದಬೆಟ್ಟು: ಗಂಗಾಧರ್ ಎಸ್. ರವರ ತೋಟದಲ್ಲಿ ಬೃಹತಾಕಾರದ ಹೆಬ್ಬಾವು ಪತ್ತೆ

Suddi Udaya
error: Content is protected !!