34.6 C
ಪುತ್ತೂರು, ಬೆಳ್ತಂಗಡಿ
February 23, 2025
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ಅಧ್ಯಕ್ಷರಾಗಿ ಪ್ರೊ.ಗಣಪತಿ ಭಟ್ ಪುನರಾಯ್ಕೆ

ಬೆಳ್ತಂಗಡಿ: 2025-26 ರ ಸಾಲಿನ ಅಭಾಸಾಪ ಬೆಳ್ತಂಗಡಿ ತಾಲೂಕು ಸಮಿತಿಯ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆಯು ಫೆ.18 ರಂದು ಗೂಗಲ್ ಮೀಟ್‌ನಲ್ಲಿ ಅಭಾಸಾಪ ರಾಜ್ಯಾಧ್ಯಕ್ಷರಾದ ಡಾ| ನಾ. ಮೊಗಸಾಲೆಯವರ ಅಧ್ಯಕ್ಷತೆಯಲ್ಲಿ ನಡೆಯಿತು.

ಜವಾಬ್ದಾರಿ ಘೋಷಣೆಯನ್ನು ಅಭಾಸಾಪ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಘುನಂದನ್ ಭಟ್‌ರವರು ನಿರ್ವಹಿಸಿದರು.

ಅಧ್ಯಕ್ಷರಾಗಿ ಪ್ರೊ.ಗಣಪತಿ ಭಟ್ ಕುಳಮರ್ವ , ಕಾರ್ಯದರ್ಶಿಯಾಗಿ ಶ್ರೀಮತಿ ಸುಭಾಷಿಣಿ, ಕೋಶಾಧಿಕಾರಿಯಾಗಿ ಕೇಶವ ಭಟ್ ಅತ್ತಾಜೆಯವರು ಪುನರಾಯ್ಕೆಗೊಂಡಿದ್ದಾರೆ. ಸಮಿತಿಯ ಉಪಾಧ್ಯಕ್ಷರಾಗಿ ರಾಮಕೃಷ್ಣ ಭಟ್ ಬದನಾಜೆ ಮತ್ತು ವಿಶ್ವೇಶ್ವರ ಭಟ್ ಉಂಡೆಮನೆಯವರು ಜವಾಬ್ದಾರಿ ಸ್ವೀಕರಿಸಿದರು. ಸಹ ಕಾರ್ಯದರ್ಶಿಗಳಾಗಿ ಶ್ರೀಮತಿ ವಿನುತಾ ರಜತ್ ಗೌಡ ಮತ್ತು ಶ್ರೀಮತಿ ಸಂತೋಷಿಣಿ, ಹಾಗೂ ಸಾಹಿತ್ಯ ಕೂಟ ಪ್ರಮುಖ್ ಆಗಿ ಶ್ರೀಮತಿ ಅಶ್ವಿಜ ಶ್ರೀಧರ್, ಮಹಿಳಾ ಪ್ರಕಾರ ಪ್ರಮುಖ್ ಶ್ರೀಮತಿ ವನಿತಾ ವಿ. ಶೆಟ್ಟಿ, ಮಕ್ಕಳ ಪ್ರಕಾರ ಪ್ರಮುಖ್ ಆಗಿ ಶ್ರೀಮತಿ ಮೇಧಾ , ವಿದ್ಯಾರ್ಥಿ ಪ್ರಕಾರ ಪ್ರಮುಖ್ ಆಗಿ ಮಹಾಬಲ ಗೌಡ ,ಮಾಧ್ಯಮ ಪ್ರಮುಖ್ ಆಗಿ ಶ್ರೀನಿವಾಸ್ ತಂತ್ರಿ ಯುವರು ಜವಾಬ್ದಾರಿಯನ್ನು ಸ್ವೀಕರಿಸಿದರು.

ಕಾರ್ಯಕಾರಿಣಿ ಸದಸ್ಯರಾಗಿ ಗುರುನಾಥ್ ಪ್ರಭು, ಶ್ರೀಮತಿ ಭಾರತಿ ಕಾಪಿನಡ್ಕ ಮತ್ತು ಶ್ರೀಮತಿ ಸುಂದರಿಯವರು ನಿಯುಕ್ತಿಗೊಂಡರು. ಇದರೊಂದಿಗೆ ಮಹಿಳಾ ಘಟಕದ ಅಧ್ಯಕ್ಷರಾಗಿ ಶ್ರೀಮತಿ ಆಶಾ ಅಡೂರು , ಕಾರ್ಯದರ್ಶಿಯಾಗಿ
ಶ್ರೀಮತಿ ಮೇಘನಾ ಪ್ರಶಾಂತ್ ಹೊಳ್ಳ ,ಜತೆ ಕಾರ್ಯದರ್ಶಿಯಾಗಿ ಶ್ರೀಮತಿ ವನಜಾ ಜೋಷಿ ಹಾಗೂ ಕೋಶಾಧಿಕಾರಿಯಾಗಿ
ಶ್ರೀಮತಿ ನಯನಾ ಟಿ. ಯವರಿಗೆ ಜವಾಬ್ದಾರಿಯನ್ನು ನೀಡಲಾಯಿತು.

ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆಯವರು ಅಭಾಸಾಪದ ಧ್ಯೇಯೋದ್ದೇಶಗಳನ್ನು ವಿವರಿಸಿ ಶುಭಾಶಯ ಕೋರಿದರು. ನಾ. ಮೊಗಸಾಲೆಯವರು ಜವಾಬ್ದಾರಿ ಪಡೆದುಕೊಂಡ ಎಲ್ಲರನ್ನೂ ಅಭಿನಂದಿಸಿ ಧ್ಯೇಯೋದ್ದೇಶದಂತೆ ಜವಾಬ್ದಾರಿಗಳನ್ನು ನಿರ್ವಹಿಸಲು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಶೈಲೇಶ್, ವಿಭಾಗ ಸಂಯೋಜಕರಾದ ಸುಂದರ ಶೆಟ್ಟಿ ಇಳಂತಿಲ ಹಾಗೂ ವಲಯದಲ್ಲಿ ನಿಯುಕ್ತಿಗೊಂಡ ಎಲ್ಲಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಗಣೇಶ್ ಅಡಿಗರವರು ಕಾರ್ಯಕ್ರಮವನ್ನು ನಿರ್ವಹಿಸಿದರು.

Related posts

ಪುಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪ್ರೌಢಶಾಲಾ ವಿಭಾಗದ ಶಿಕ್ಷಕರಿಗೆ ಸ್ವಾಗತ-ವಿದಾಯ

Suddi Udaya

ದೇವಿ ಭಗವತಿ ಅಮ್ಮನವರ ಬ್ರಹ್ಮಕಲಶೋತ್ಸವತಂತ್ರಿಗಳಿಗೆ ಪೂರ್ಣಕುಂಭದ ಸ್ವಾಗತ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಉಜಿರೆಯಿಂದ ಧರ್ಮಸ್ಥಳಕ್ಕೆ 12ನೇ ವಷ೯ದ ವೈಭವದ ಪಾದಯಾತ್ರೆ: ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿದ ಭಕ್ತರು : ಶಿವನಾಮ ಸ್ಮರಣೆಯೊಂದಿಗೆ ಭಕ್ತರ ಹೆಜ್ಜೆ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಗೆ ವಲಯದ ಜೆಜೆಸಿ ಮತ್ತು ಲೇಡಿ ಜೆಸಿ ಸಮ್ಮೇಳನದಲ್ಲಿ ಪ್ರಶಸ್ತಿ

Suddi Udaya

ಧರ್ಮಸ್ಥಳ: ಅಪರಿಚಿತ ವ್ಯಕ್ತಿ ಸಾವು: ವಾರೀಸುದಾರರು ಧರ್ಮಸ್ಥಳ ಠಾಣೆಯನ್ನು ಸಂಪರ್ಕಿಸುವಂತೆ ಮನವಿ

Suddi Udaya

ಮುಂಡಾಜೆ: ವಿದ್ಯುತ್ ಲೈನ್ ಮೇಲೆ ಬಿದ್ದ ಮರ: ಗುಡ್ಡಕ್ಕೆ ಬೆಂಕಿ

Suddi Udaya
error: Content is protected !!