
ಪಟ್ರಮೆ: ಶ್ರೀ ಮಹಾ ವಿಷ್ಣುಮೂರ್ತಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ದೈವಗಳ ನೇಮೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಕೆ. ಯು. ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಫೆ. 19ರಂದು ಪ್ರಾರಂಭಗೊಂಡು ಫೆ. 22ರವರೆಗೆ ನಡೆಯಲಿದೆ.
ಫೆ.19ರಂದು ಬೆಳಿಗ್ಗೆ ತೋರಣ ಮೂಹೂರ್ತ, ಊರವರಿಂದ ಹೊರೆಕಾಣಿಕೆ, ಉಗ್ರಾಣ ಮೂಹೂರ್ತ ಕಾರ್ಯಕ್ರಮ ಜರುಗಿತು.

ಈ ಸಂದರ್ಭದಲ್ಲಿ ಪವಿತ್ರಪಾಣಿ ಪ್ರಶಾಂತ್ ಶಬರಾಯ, ಅರ್ಚಕರು ರಾಮಚಂದ್ರ ನೂರಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶ್ರೀಧರ ಶಬರಾಯ, ಜಾತ್ರಾ ಸಮಿತಿ ಅಧ್ಯಕ್ಷ ರೋಹಿತ್ ಕುಮಾರ್ ಪಚ್ಚೆಮನೆ, ಜಾತ್ರಾ ಸಮಿತಿ ಖಜಾಂಜಿ ಬಾಲಕೃಷ್ಣ ಹಿಮರಡ್ಡ, ಜಾತ್ರಾ ಸಮಿತಿ ಕಾರ್ಯದರ್ಶಿ ಪ್ರಶಾಂತ ಶಬರಾಯ ಗುಂಡಿಮಾರು, ಉಪಾಧ್ಯಕ್ಷ ಉಮೇಶ್ ಗೌಡ ಅಲಂಗೂರು, ಜೊತೆ ಖಜಾಂಜಿ ಜಯರಾಮ ಮಣಿಯೇರು, ಜೊತೆ ಕಾರ್ಯದರ್ಶಿ ಗಣೇಶ್ ಶೀಮುಳ್ಳು, ಸದಸ್ಯರು ಹಾಗೂ ಊರವರು ಉಪಸ್ಥಿತರಿದ್ದರು.
ಸಂಜೆ ವಾಸ್ತು ಹೋಮ, ವಾಸ್ತು ಪೂಜೆ, ರಾಕ್ಷೋಘ್ನ ಹೋಮ, ಸಂಜೆ 6.00ಕ್ಕೆ ಊರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಬಳಿಕ ಚಿಗುರು ಕಲಾವಿದೆರ್ ನೆಲ್ಯಾಡಿ ಇವರಿಂದ ‘ಕುಸಾಲ್ದ ಕುರ್ಲರಿ’ ಕಾಮಿಡಿ ಜರುಗಲಿದೆ.