23 C
ಪುತ್ತೂರು, ಬೆಳ್ತಂಗಡಿ
February 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪ್ರತಿಷ್ಟಿತ ಎಳ್ಕಜೆ ಗುತ್ತಿನಲ್ಲಿ ಗೆಜ್ಜೆ ಗಿರಿಯ ಜಾತ್ರೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ಬೆಳ್ತಂಗಡಿ ತಾಲೂಕಿನ ಪ್ರತಿಷ್ಠಿತ ಎಲ್ಕಜೇ ಗುತ್ತಿನ ಆಡಳಿತ ಮೊಕ್ತೇಸರ ದಿನೇಶ್ ಅಮೀನ್ ಕುಂದಾಪುರ ರವರ ನೇತೃತ್ವದಲ್ಲಿ ಎಲ್ಕಜೆ ಗುತ್ತಿನಲ್ಲಿ ಗೆಜ್ಜೆ ಗಿರಿಯ ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಯಜಮಾಡಿಯ ಮಹೇಶ ಶಾಂತಿ ಯವರ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.

ಕ್ಷೇತ್ರದ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ಅವರು ಮಾತನಾಡುತ್ತಾ ಪವಿತ್ರ ಪುಣ್ಯಕ್ಷೇತ್ರ ಗೆಜ್ಜೆ ಗಿರಿಯಲ್ಲಿ ಮಾರ್ಚ್1 ರಿಂದ ಮಾರ್ಚ್ 5 ರ ತನಕ ಜರಗುವ ಜಾತ್ರೋತ್ಸವದೊಂದಿಗೆ ಮಾರ್ಚ್ 2 ರಂದು ಆದಿತ್ಯವಾರ ಮಹಿಳೆಯರಿಗಾಗಿ ಮಡಿಲು ಸೇವೆಯ ವಿಶಿಷ್ಟ ಕಾರ್ಯಕ್ರಮ ಜರಗಲಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ವಿನಂತಿಸಿದರು. ಬೆಳ್ತಂಗಡಿ ತಾಲೂಕಿನ ಮುಖ್ಯ ಸಂಚಾಲಕ ನಿತ್ಯಾನಂದ ನಾವರ ಸ್ವಾಗತಿಸಿ ಪ್ರಸ್ತಾವಿಸಿದರು.


ರಕ್ಷಿತ್ ಶಿವರಾಮ್, ಜಯರಾಮ ಬಂಗೇರ, ದಿನೇಶ್ ಬೆಳಿಬೈಲು, ಮೋಹನ್ ಪೂಜಾರಿ , ಬಾಲಕೃಷ್ಣ ಪೂಜಾರಿ, ಸುನಿಲ್ ಪೂಜಾರಿ,ಡಾ. ಸುಧಾಮ್ಸ್, ಶ್ರೀಮತಿ ಲೋಲಾಕ್ಷಿ ಶೇಖರ ಬಂಗೇರ, ಶ್ರೀಮತಿ ಸಂಗೀತ ಪಿ ಹೇರಾಜೆ, ಶ್ರೀಮತಿ ರಜನಿ ಪೂಜಾರಿ, ಹರೀಶ್ ಪೂಜಾರಿ ಸೂಲಬೆಟ್ಟು, ಹಾಗೂ ನೂರಾರು ಭಕ್ತರು ಜೊತೆಗಿದ್ದರು.

Related posts

ನೆರಿಯ : ಬಾಂದಡ್ಕ ಸೇಸಪ್ಪ ಗೌಡ ರವರ ಮನೆಯ ಹಿಂಭಾಗದ ಗುಡ್ಡ ಕುಸಿತ

Suddi Udaya

ಬೆಳಾಲು ಶ್ರೀ ಧ.ಮಂ. ಪ್ರೌಢಶಾಲೆಯಲ್ಲಿ ಉಚಿತ ವೈದ್ಯಕೀಯ ಶಿಬಿರ

Suddi Udaya

ವೇಣೂರು: ಬಜಿರೆ ನಿವಾಸಿ ಹೊನ್ನಮ್ಮ ನಿಧನ

Suddi Udaya

ಉಜಿರೆ :ರೋಟರಿ ಕ್ಲಬ್ ನಲ್ಲಿ ಇಫ್ತಾರ್ ಆಚರಣೆ

Suddi Udaya

ಎಸ್.ಡಿ.ಎಂ ಸ್ನಾತಕೋತ್ತರ ವಿಭಾಗದಿಂದ “ಲೈಫ್ ಸ್ಕಿಲ್ಸ್ ಎಜುಕೇಶನ್ ಫಾರ್ ಸಸ್ಟೈನಬಲ್ ಡೆವಲಪ್ಮೆಂಟ್” ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ :ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಪ್ರಯಾಣ ಬೆಳೆಸಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಮತ್ತು ರವಿಶಂಕರ್ ಗುರೂಜಿ

Suddi Udaya
error: Content is protected !!