21 C
ಪುತ್ತೂರು, ಬೆಳ್ತಂಗಡಿ
February 24, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ನೆರಿಯ : ಹಾಡಹಾಗಲೇ ಮನೆಗೆ ನುಗ್ಗಿ ರೂ.3.12 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ನೆರಿಯ :ಇಲ್ಲಿಯ ಅಕ್ಕೋಳೆ ಎಂಬಲ್ಲಿ ಹಾಡಹಾಗಲೇ ಕಳ್ಳರು ಮನೆಯ ಗೋದ್ರೆಜ್ ನ ಬಾಗಿಲು ತೆರೆದು ರೂ. 3,12,000/- ಮೌಲ್ಯದ 52 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಫೆ.19 ರಂದು ನಡೆದಿದೆ.

ಫಾತಿಮತ್ ರಂಝೀನ್ ರವರ ದೂರಿನಂತೆ, ಫೆ. 19 ರಂದು ಬೆಳಿಗ್ಗೆ ನೆರಿಯಾ ಗ್ರಾಮದ ಅಕ್ಕೋಳೆ ಎಂಬಲ್ಲಿರುವ ಮನೆಯಲ್ಲಿ, ಮನೆಯ ಬಾಗಿಲು ತೆರೆದಿಟ್ಟು ಅಡುಗೆ ಕೋಣೆಯಲ್ಲಿ ಕೆಲಸ ಮಾಡಿಕೊಂಡಿದ್ದು, ಸುಮಾರು ಬೆಳಿಗ್ಗೆ 9.30 ಗಂಟೆಗೆ ತನ್ನ ಮನೆಯಲ್ಲಿರುವ ಕೋಣೆಗೆ ಹೋದಾಗ ಗೋದ್ರೆಜ್ ನ ಬಾಗಿಲು ತೆರೆದು ಬಟ್ಟೆಗಳೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದ್ದು, ಗೋದ್ರೆಜ್ ನಲ್ಲಿ ಇಟ್ಟಿದ್ದ ಸುಮಾರು 52 ಗ್ರಾಂ ಚಿನ್ನಾಭರಣಗಳು ಕೂಡಾ ಕಾಣೆಯಾಗಿರುತ್ತದೆ.

ಈ ಬಗ್ಗೆ ಫಾತಿಮತ್ ರಂಝೀನ್ ಅಡುಗೆ ಕೋಣೆಯಲ್ಲಿ ಇದ್ದ ಸಮಯ ಯಾರೋ ಕಳ್ಳರು ಮನೆಯೊಳಗೆ ಬಂದು ಅವರ ಬಾಬ್ತು ಸುಮಾರು ರೂ. 3,12,000/- ರೂ ಮೌಲ್ಯದ 52 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ: 06/2025 ಕಲಂ: 305 ಬಿ ಎನ್ ಎಸ್ ರಂತೆ ಪ್ರಕರಣ ದಾಖಲಾಗಿರುತ್ತದೆ.

Related posts

ಕುಡಾಳ್ ದೇಶಸ್ಥ ಆದ್ಯ ಗೌಡ್ ಬ್ರಾಹ್ಮಣ ಸಂಘದ ಸಭೆ

Suddi Udaya

ಬಳಂಜ ಸರಕಾರಿ ಪ್ರೌಢ ಶಾಲೆಗೆ ಶೇ.92.5 ಫಲಿತಾಂಶ

Suddi Udaya

ಬಂದಾರು ಸ.ಹಿ.ಪ್ರಾ. ಶಾಲೆಯ ನಲಿಕಲಿ ಮಕ್ಕಳು ಮತ್ತು ಶಿಕ್ಷಕರು ಕಡಮ್ಮಾಜೆ ಫಾರ್ಮ್ಸ್ ಗೆ ಭೇಟಿ

Suddi Udaya

ಸುದ್ದಿ ಉದಯ ಪತ್ರಿಕೆಯ ಫಲಶ್ರುತಿ; ಗೇರುಕಟ್ಟೆ ಜನತಾ ಕಾಲೋನಿಯಲ್ಲಿ ಮನೆಯಲ್ಲಿಯೇ ಇದ್ದ ಬಾಲಕಿ ಮರಳಿ ಶಾಲೆಗೆ

Suddi Udaya

ಕಲ್ಮಂಜ ಪ್ರೌಢಶಾಲೆಯ ವಿದ್ಯಾರ್ಥಿಗಳು ಯೋಗಾಸನದಲ್ಲಿ ವಿಭಾಗಮಟ್ಟಕ್ಕೆ ಆಯ್ಕೆ

Suddi Udaya

ಮಂಗಳೂರು ಭವಿಷ್ಯ ನಿಧಿ ಕಚೇರಿಗೆ ಪಿ.ಎಫ್. ಬೋರ್ಡನ ಕೇಂದ್ರೀಯ ಸದಸ್ಯ ಹಿರಣ್ಮಯಿ ಪಾಂಡ್ಯ ಭೇಟಿ

Suddi Udaya
error: Content is protected !!