ಅರಸಿನಮಕ್ಕಿ: ಅರಿಕೆಗುಡ್ಡೆ ಶ್ರೀ ವನದುರ್ಗಾ ದೇವಸ್ಥಾನದಲ್ಲಿ ಫೆ.21 ರಂದು ವಾರ್ಷಿಕ ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಶ್ರೀ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರಗಲಿರುವುದು.

ಇಂದು ಬೆಳಿಗ್ಗೆ ಪುಣ್ಯಾಹ, ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ಮಧ್ಯಾಹ್ನ ಚಂಡಿಕಾ ಹೋಮದ ಪೂರ್ಣಾಹುತಿ, ಮಹಾಪೂಜೆ, ಅನ್ನಸಂತರ್ಪಣೆ ಜರುಗಿತು.


ಈ ಸಂದರ್ಭದಲ್ಲಿ ಶ್ರೀ ವನದುರ್ಗಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಪಿಲಿಕಬೆ, ಆಡಳಿತ ಮಂಡಳಿಯ ಅಧ್ಯಕ್ಷ ಪದ್ಮಯ್ಯ ಬಾರಿಗಾ, ಟ್ರಸ್ಟ್ ಸದಸ್ಯರು, ಅರ್ಚಕರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


ಸಂಜೆ ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ರಂಗಪೂಜೆ, ರಾತ್ರಿ 9ಕ್ಕೆ ತುಳುವೆರೆ ಉಡಲ್ ಜೋಡುಕಲ್ಲು ಕಲಾವಿದರಿಂದ ತನಿಯಜ್ಜೆ ತುಳು ವಿನೂತನ ಶೈಲಿಯ ನಾಟಕ ನಡೆಯಲಿದೆ.