
ಉಜಿರೆ: ಉಜಿರೆ ಗ್ರಾಮದ ಅರಿಪ್ಪಾಡಿ ಮಠದ ನಿವಾಸಿ ಬಾಲಕೃಷ್ಣ ಅರಿಪ್ಪಾಡಿತ್ತಾಯ ( 84ವ ) ಅವರು ವಯೋ ಸಹಜ ಅಸೌಖ್ಯದಿಂದ ಇಂದು ಬೆಳಗ್ಗೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಗ್ರಾಮ ಗ್ರಾಮಕರಣಿಕರಾಗಿ ಬೆಳ್ತಂಗಡಿ ತಾಲೂಕು ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸೇವೆ ಸಲ್ಲಿಸಿ, ಎಲ್ಲರ ಪ್ರೀತಿ -ವಿಶ್ವಾಸಕ್ಕೆ ಪಾತ್ರರಾಗಿದ್ದರು. ಉಜಿರೆಯಲ್ಲಿ ಅರಿಪ್ಪಾಡಿ ಕಾಂಪ್ಲೆಕ್ಸ್ ಎಂಬ ವಾಣಿಜ್ಯ ಸಂಕೀರ್ಣ ನಿಮಿ೯ಸಿ ಅದನ್ನು ನಿವ೯ಹಿಸಿಕೊಂಡು ಬಂದಿದ್ದರು.
ಮೃತರು ಎರಡು ಗಂಡು, ಎರಡು ಹೆಣ್ಣು ಮಕ್ಕಳು ಬಂಧು ವಗ೯ದವರನ್ನು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.