23.1 C
ಪುತ್ತೂರು, ಬೆಳ್ತಂಗಡಿ
April 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕಕ್ಯಪದವು : ಎಲ್ ಸಿ ಆರ್ ವಿದ್ಯಾಸಂಸ್ಥೆಯ ಪದವಿ ವಿಭಾಗದಲ್ಲಿ ಉಚಿತ ಐಬಿಪಿಎಸ್ ಪರೀಕ್ಷಾ ತರಬೇತಿಗೆ ಅಧೀಕೃತ ಚಾಲನೆ:

ಕಕ್ಯಪದವು : ಎಲ್.ಸಿ.ಆರ್ ವಿದ್ಯಾಸಂಸ್ಥೆ ಕಕ್ಯಪದವು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು
ಅವಕಾಶವಂಚಿತರಾಗಬಾರದೆಂಬ ಸದುದ್ದೇಶದಿಂದ ಸಂಸ್ಥೆಯನ್ನು ಕಟ್ಟಿಬೆಳೆಸಿದ ಸಂಸ್ಥಾಪಕರಾದ ದಿ.ರೋಹಿನಾಥ ಪಾದೆಯವರ ಕನಸಿನಂತೆ, ಸಂಸ್ಥೆಯನ್ನು ಮುನ್ನಡೆಸುತ್ತಿರುವ ಸಂಚಾಲಕರಾದ ಶ್ರೀಮತಿ ಬಬಿತಾ.ಆರ್.ನಾಥ್ ಹಾಗೂ ಕಾರ್ಯದರ್ಶಿಗಳಾದ ಶಿವಾನಿ.ಆರ್.ನಾಥ್ ಇವರ ಅಭಿಲಾಷೆಯಂತೆ ಇಲ್ಲಿನ ಪದವಿ ವಿಭಾಗದ ಬಿ.ಕಾಂ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ಜ್ಞಾನವನ್ನು ಮೂಡಿಸುವ ನಿಟ್ಟಿನಲ್ಲಿ ಹೊಸ ಹೊಸ ಯೋಜನೆ ಮತ್ತು ಯೋಚನೆಯೊಂದಿಗೆ ವಿದ್ಯಾಸಂಸ್ಥೆಯು ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉದ್ಯೋಗ ಪೂರಕ ಶಿಕ್ಷಣದ ಅನಿವಾರ್ಯತೆಯನ್ನು ಅರಿತು ಪದವಿಯೊಂದಿಗೆ ವಿದ್ಯಾರ್ಥಿಗಳು ತಮ್ಮನ್ನು ಸ್ಪರ್ಧಾತ್ಮಕವಾಗಿ ತೊಡಗಿಸಿಕೊಂಡು ಹೊರಜಗತ್ತಿಗೆ ತೆರೆದುಕೊಳ್ಳಬೇಕೆಂಬ ಉದ್ದೇಶವನ್ನಿಟ್ಟುಕೊಂಡು ಇದೀಗ ಐಬಿಪಿಎಸ್ ಬ್ಯಾಂಕಿಂಗ್ ತರಬೇತಿಯನ್ನು ಕಾಲೇಜಿನಲ್ಲಿಯೇ ಉಚಿತವಾಗಿ ನೀಡಬೇಕೆಂದು ಸಂಸ್ಥೆಯ ಆಡಳಿತ ಮಂಡಳಿಯ ಸಹಕಾರದೊಂದಿಗೆ ಉಚಿತ ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷಾ ತರಬೇತಿಗೆ ಫೆ.18 ರಂದು ಅಧೀಕೃತವಾಗಿ ಚಾಲನೆಯನ್ನು ನೀಡಿ ತರಬೇತಿಯನ್ನು ಆರಂಭಿಸಲಾಯಿತು.

ಸಂಸ್ಥೆಯ ಪ್ರಾಂಶುಪಾಲರಾದ ಜೋಸ್ಟನ್ ಲೋಬೊ, ಸಂಯೋಜಕರಾದ ಯಶವಂತ್.ಜಿ.ನಾಯಕ್ , ಪದವಿ ವಿಭಾಗದ ಮುಖ್ಯಸ್ಥೆ, ದೀಕ್ಷಿತಾ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ವಿಂದ್ಯಾಶ್ರೀ , ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮಕ್ಕೆ ಅಧೀಕೃತವಾಗಿ ಚಾಲನೆಯನ್ನು ನೀಡುವ ಮೂಲಕ ಯಶಸ್ವಿಯಾಗಿ ನೆರವೇರಿತು .

ಪದವಿ ವಿಭಾಗದ ಉಪನ್ಯಾಸಕಿ ಶ್ರೀಮತಿ ಗೀತಾ ಡಿ ಹಾಗೂ ಕು. ರೂಪಾಕ್ಷಿ ಇವರು ಐಬಿಪಿಎಸ್ ತರಬೇತಿ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.

Related posts

ಬೆಳ್ತಂಗಡಿ : ಮಲೆಕುಡಿಯ ಆದಿವಾಸಿ ಕುಟುಂಬಗಳಿಗೆ ಅರಣ್ಯ ಇಲಾಖೆಯಿಂದ ವಿದ್ಯುತ್ ಭಾಗ್ಯಕ್ಕೆ ಅನುಮತಿ

Suddi Udaya

ಗರ್ಡಾಡಿ: ಬೋಳಿಯಾರ್ ನಲ್ಲಿ 25 ಮೇಕೆಯ ತಲೆ ಕಡಿದು ಪ್ರಮುಖರ ಫೋಟೋ ಬಳಸಿ ವಾಮಾಚಾರ

Suddi Udaya

ಕಾಂಗ್ರೇಸ್ ಪ್ರಣಾಳಿಕೆಯ ಭಜರಂಗದಳ ನಿಷೇಧದ ವಿರುದ್ದ ಸಿಡಿದೆದ್ದ ಹಿಂದೂ ಸಂಘಟನೆ: ಭಜರಂಗದಳ ವಿಶ್ವ ಹಿಂದೂ ಪರಿಷತ್ ನಿಂದ ಬೆಳ್ತಂಗಡಿಯಲ್ಲಿ ಪ್ರತಿಭಟನೆ

Suddi Udaya

ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರಿಂದ ಬೆನಕ ಆಸ್ಪತ್ರೆಯ ವಿಸ್ತೃತ ಕಟ್ಟಡದ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ

Suddi Udaya

ಬಿಜೆಪಿ ಬೆಳ್ತಂಗಡಿ ಮಂಡಲದ ಸಾಮಾಜಿಕ ಜಾಲತಾಣ ನೂತನ ಸಂಚಾಲಕರಾಗಿ ಜಯಂತ್ ಜಾನು

Suddi Udaya

ಬೆಳ್ತಂಗಡಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಸಿಬ್ಬಂದಿ ಉಸ್ಮಾನ್ ಗರ್ಡಾಡಿ ರವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

Suddi Udaya
error: Content is protected !!