ಬೆಳ್ತಂಗಡಿ: ಕೊಕ್ಕಡ-ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕುದ್ರಾಯ ಸಮೀಪದ ಬೋಳಿಯಾರು ಎಂಬಲ್ಲಿ ಮೋರಿಯ ತಡೆಗೋಡೆ ಕುಸಿದು ಬಿದ್ದು ಕಾಲಗಳೇ ಕಳೆದು ಹೋಗಿದ್ದು ಇದೀಗ ರಸ್ತೆಯ ಬದಿಯ ವರೆಗೆ ಕುಸಿದಿದ್ದು ಅಪಾಯಕಾರಿಯಾಗಿದೆ.

ಈ ಹೆದ್ದಾರಿಯಲ್ಲಿ ವಾಹನ ದಟ್ಟನೆ ಅಧಿಕವಾಗಿದ್ದು ರಾತ್ರಿ ವೇಳೆ ರಸ್ತೆ ಬದಿ ಕುಸಿದಿರುವುದು ಗೋಚರಿಸದ್ದಂತಿದೆ. ಮಹಾ ಶಿವರಾತ್ರಿ ಸಂದರ್ಭದಲ್ಲಿ ಅಧಿಕ ವಾಹನಗಳು ಬರುವ ಸಾಧ್ಯತೆ ಹೆಚ್ಚಿದ್ದು, ಯಾವುದೇ ಸೂಚನಾ ಫಲಕಗಳನ್ನು ಅಳವಡಿಸಿಲ್ಲ. ಅಪಾಯ ಸಂಭವಿಸುವ ಮುನ್ನವೇ ಸಂಬಂಧ ಪಟ್ಟ ಇಲಾಖೆಯವರು ಈ ಬಗ್ಗೆ ಗಮನ ಹರಿಸಿ ಸಮಸ್ಯೆಯನ್ನು ಸರಿದೂಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.