23.6 C
ಪುತ್ತೂರು, ಬೆಳ್ತಂಗಡಿ
April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಗುರುವಾಯನಕೆರೆ; ವಾರ್ಷಿಕ “ದಿಕ್ರ್ ಹಲ್ಖಾ” ಕಾರ್ಯಕ್ರಮ: ಉನ್ನತ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

ಬೆಳ್ತಂಗಡಿ: ಹಝ್ರತ್ ಶೈಖ್ ಹಯಾತುಲ್ ಔಲಿಯಾ ದರ್ಗಾ ಶರೀಫ್ ಮತ್ತು ಜುಮ್ಮಾ ಗುರುವಾಯನಕೆರೆ ಇಲ್ಲಿ ವಾರ್ಷಿಕ ದಿಕ್ರ್ ಹಲ್ಖಾ ಸಮಾವೇಶ, ಮತಪ್ರವಚನ ಹಾಗೂ ಉನ್ನತ ವ್ಯಾಸಂಗಕ್ಕೆ ತೆರಳುವ ದರ್ಸ್ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಫೆ.17 ರಂದು ಗುರುವಾಯನಕೆರೆ ಮಸ್ಜಿದ್ ಅಂಗಣದಲ್ಲಿ ಜರುಗಿತು.
ಸಯ್ಯಿದ್ ಪೊಮ್ಮಾಜೆ ತಂಙಳ್ ದರ್ಗಾ ಝಿಯಾರತ್ ಗೆ ನೇತೃತ್ವ ನೀಡಿದರು. ಅಧ್ಯಕ್ಷತೆಯನ್ನು ಜಮಾಅತ್ ಅಧ್ಯಕ್ಷ ಎಸ್.ಎಮ್.ಎಸ್ ಅಬ್ದುಲ್ ಲೆತೀಫ್ ಹಾಜಿ ವಹಿಸಿದ್ದರು.

ಉದ್ಘಾಟನೆಯನ್ನು ಸಯ್ಯಿದ್ ವಾದಿ ಇರ್ಫಾನ್ ತಂಙಳ್ ಸಬರಬೈಲು ನೆರವೇರಿಸಿದರು. ಕೇರಳದ ಪ್ರಸಿದ್ಧ ವಾಗ್ಮಿಗಳಾದ ಮುಹಮ್ಮದ್ ರಾಶಿದ್ ಬುಖಾರಿ ಕುಟ್ಯಾಡಿ ಮುಖ್ಯ ಪ್ರವಚನ‌ ನಡೆಸಿಕೊಟ್ಟರು. ಸಮಾರಂಭದ ನೇತೃತ್ವ ಮತ್ತು ಅಂತಿಮ ದುಆ ವಿಧಿಯನ್ನು ಸಯ್ಯಿದ್ ಸಾದಾತ್‌ ತಂಙಳ್ ಬಾ ಅಲವಿ ನೆರವೇರಿಸಿದರು. ಮುಂದಿನ ಮಾಸಿಕ ಕಾರ್ಯಕ್ರಮಗಳಿಗೆ ವಾಗ್ದಾನ ನಡೆಸಿಕೊಟ್ಟರು.

ಈ‌ ಸಮಾರಂಭದಲ್ಲಿ ಹಬೀಬ್ ಸಖಾಫಿ ಅಲ್ ಮುಈನಿ, ಯಾಕೂಬ್ ಮುಸ್ಲಿಯಾರ್ ಮೇಲಂತಬೆಟ್ಟು, ಜಿ.ಎಸ್ ಆದಂ ಸಾಹೇಬ್, ಮುಹಮ್ಮದ್ ಆಸಿಫ್ ಮಿಸ್ಬಾಹಿ, ಮುಹಮ್ಮದ್ ಶರೀಫ್ ಝುಹ್ರಿ, ಅಬ್ದುರ್ರಹೀಂ ಸಖಾಫಿ ಅಲ್ ಹಿಮಮಿ, ನಿಝಾರ್ ಕೆ.ಪಿ, ಮುಹಮ್ಮದ್ ರಫಿ, ಜಿ ಮುತ್ತಲಿಬ್, ಜಿ.ಕೆ ಉಮರಬ್ಬ, ಹಾಜಿ ಹಸೈನಾರ್ ಶಾಫಿ, ಕೆ.ಎ ಉಸ್ಮಾನ್ ಬಳಂಜ, ಅಬ್ದುಲ್ ಹಕೀಂ ಶಾಫಿ ಸುನ್ನತ್‌ಕೆರೆ, ಬಿ. ಕಾಸಿಂ ಬದ್ಯಾರು, ಅಬ್ದುಲ್‌ ಅಝೀಝ್ ಬಳಂಜ, ಸಯ್ಯಿದ್ ಕೋಂಟುಪಲಿಕೆ, ಕೆರಿಂ ಹಾಜಿ, ಬಿ.ಎ ನಝೀರ್, ಹಂಝ ಮದನಿ ತೆಂಕಕಾರಂದೂರು ಮೊದಲಾದವರು ಉಪಸ್ಥಿತರಿದ್ದರು.

ಗುರುವಾಯನಕೆರೆ ಧಾರ್ಮಿಕ ದರ್ಸ್‌ನಲ್ಲಿ ಧಾರ್ಮಿಕ ವಿದ್ಯಾಭ್ಯಾಸ ಪೂರೈಸಿ ಮುಂದಿನ ಪದವಿ ಉನ್ನತ ಅಧ್ಯಯನಕ್ಕಾಗಿ ಕೇರಳದ ವಿವಿಧ ದ‌ಅವಾ ದರ್ಸ್ ಅರೆಬಿಕ್ ಕಾಲೇಜುಗಳಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗನ್ನು ಈ ಸಂದರ್ಭದಲ್ಲಿ ಬೀಳ್ಕೊಡಲಾಯಿತು. ಅವರ ಮುಂದಿನ ವಿಧ್ಯಾಭ್ಯಾಸದ ಗ್ರಂಥ ಗಳನ್ನು ದಾನಿಗಳು ಕೊಡುಗೆಯಾಗಿ ನೀಡಿದ್ದು ಅದನ್ನು ಅವರಿಗೆ ಹಸ್ತಾಂತರಿಸಲಾಯಿತು.


ಗುರುವಾಯನಕೆರೆ ಖತೀಬ್ ಎ.ಕೆ ರಝಾ ಅಮ್ಜದಿ ಸ್ವಾಗತಿಸಿದರು. ಗುರುವಾಯನಕೆರೆ ಮುದರ್ರಿಸ್ ಜುನೈದ್ ಸಖಾಫಿ ಅಲ್ ಮುಈನಿ ಬೆಳ್ಮ ಕಾರ್ಯಕ್ರಮ ನಿರೂಪಿಸಿದರು.

Related posts

ಉಜಿರೆ ಎಸ್. ಡಿ.ಎಂ ಕಾಲೇಜು : ಎನ್ ಎಸ್ ಎಸ್ ಘಟಕಕ್ಕೆ ಸುವರ್ಣ ಸಂಭ್ರಮ: ಅ.5:ಹಿರಿಯ ಸ್ವಯಂಸೇವಕರ ಒಗ್ಗೂಡುವಿಕೆಯಲ್ಲಿ ‘ ಸುವರ್ಣ ಸಮ್ಮಿಲನ ‘ ಕಾರ್ಯಕ್ರಮ

Suddi Udaya

ಲಾಯಿಲ: ಪ್ರಸನ್ನ ಆಯುರ್ವೇದ ಮತ್ತು ಆಸ್ಪತ್ರೆ ಕಾಲೇಜು ಹಾಗೂ ಪ್ರಸನ್ನ ನರ್ಸಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ

Suddi Udaya

ಕೆ.ಪಿ.ಎಸ್ ಪುಂಜಾಲಕಟ್ಟೆ ಪ್ರೌಢಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಕಲೋತ್ಸವ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಗೇರುಕಟ್ಟೆ: ಮನ್ ಶರ್ ವಿದ್ಯಾಸಂಸ್ಥೆಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ

Suddi Udaya

ಮುಂಡಾಜೆ ಗ್ರಾ.ಪಂ. ನಲ್ಲಿ ಬುಡಕಟ್ಟು ಸಮುದಾಯಗಳಿಗೆ ಸರ್ಕಾರದ ಮೂಲಭೂತ ದಾಖಲೆಗಳ ನೋಂದಣಿ ಮಹಾ ಅಭಿಯಾನ

Suddi Udaya
error: Content is protected !!