ಪರೀಕ ಆತ್ರಾಡಿ ಮಸೀದಿಯಿಂದ ಆರಂಭಿಸಿ ಶ್ರೀ ಶ್ರೀನಿವಾಸ ದೇವಸ್ಥಾನದವರೆಗೆ ಮಹತ್ವಾಕಾಂಕ್ಷೆಯ ಮಾರ್ಗದ ಅಗಲೀಕರಣದೊಂದಿಗೆ ಡಾಮರೀಕರಣದ ಕೆಲಸಕ್ಕೆ ಶ್ರೀ ದೇವರ ಪ್ರಸಾದ ಹಾಕಿ ಅರ್ಚಕರು ಕಾಯಿ ಒಡೆಯುವ ಮೂಲಕ ಇಂದು ಚಾಲನೆಗೊಳಿಸಲಾಯಿತು.

ವಿನಯ ಕುಮಾರ್ ಸೆೊರಕೆ ಯವರ ಶಿಫಾರಸಿನೊಂದಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕೀಹೊಳಿ ಯವರ ಅನುದಾನದಲ್ಲಿ, ಗುತ್ತಿಗೆದಾರರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ರವರ ಸತತ ಪ್ರಯತ್ನ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಇಸ್ಮಾಯಿಲ್ ರವರ ಮುತುವರ್ಜಿಯಲ್ಲಿ ಕೆಲಸವು ಕಾರ್ಯಗತಗೊಂಡಿದೆ.
ಈ ಸಂದರ್ಭದಲ್ಲಿ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇದರ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ, ಇಸ್ಮಾಯಿಲ್, ಸೋಮನಾಥ್ ಶೆಟ್ಟಿ , ಡಾ. ಗೋಪಾಲ್ ಪೂಜಾರಿ, ಡಾ ಶೋಭಿತ್ ಶೆಟ್ಟಿ, ಪ್ರವೀಣ್ ಕುಮಾರ್ , ಹಾಜಿ ಅಬೂಬಕ್ಕರ್ , ಸೌಖ್ಯವನ ಆಡಳಿತ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.