ಬೆಳ್ತಂಗಡಿ: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾಯಿತ ನಿರ್ದೇಶಕರು ಹಾಗೂ ಪದಾಧಿಕಾರಿಗಳ ಸಮಾವೇಶ ಮತ್ತು ಕಾರ್ಯಾಗಾರ ಫೆ.20ರಂದು ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಆಯೋಜನೆ ಗೊಂಡಿದೆ.


ಜಿಲ್ಲೆ, ತಾಲೂಕು ಶಾಖೆಗಳ ನಿರ್ದೇಶಕ, ಸದಸ್ಯರು, ಪದಾಧಿಕಾರಿಗಳು ಸಮಾವೇಶದಲ್ಲಿ ಪಾಲ್ಗೊಂಡಿದ್ದಾರೆ. ಬೆಳ್ತಂಗಡಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಜಯರಾಜ್ ಜೈನ್, ಖಜಾಂಜಿ ಸಂಜೀವ ನಾರಾಯಣ ಶೆಟ್ಟಿ, ಕೋಶಾಧಿಕಾರಿ ಪ್ರದೀಪ್ ಕುಮಾರ್, ನಿರ್ದೇಶಕರಾದ ವಿಶ್ವ ಕೆ, ಗಾಯತ್ರಿ, ಗಣೇಶ್, ರವಿಕುಮಾರ್ ಬಿ.ಆರ್., ಸುರೇಶ ಎಂ. ಚಂದ್ರಶೇಖರ, , ಮಧು ಕುಮಾರ್ ಡಿ.ಪಿ., ರತ್ನಾವತಿ ಪಿ., ಸಿದ್ದೇಶ್, ಡಿ ಕೃಷ್ಣ, ರಾಜೇಶ್ ಪೆರಿಂಜೆ, ಅಮಿತಾನಂದ ಹೆಗ್ಡೆ, ರಮೇಶ್, ಸುಭಾಶ್ಚಂದ್ರ ಪೂಜಾರಿ, ವಿಜೇತ್ ಜೈನ್, ಹಾಗೂ ಸದಸ್ಯರು ಭಾಗವಹಿಸಿದ್ದರು.