ಕಲ್ಮoಜ : ಕಲ್ಮಂಜ ಗ್ರಾಮ ನಿವಾಸಿ ರಘು (62 ವರ್ಷ )ಅವರು ಅಲ್ಪಕಾಲದ ಅನಾರೋಗ್ಯದಿಂದ ಫೆ 19 ರಂದು ನಿಧನರಾದರು.
ಮೃತರು ಪತ್ನಿ ಸುಂದರಿ, ಮಕ್ಕಳಾದ ಧನಂಜಯ, ಮಧುರಾಜ್, ಲೋಹಿತ್, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರ ಆಪ್ತ ಸಹಾಯಕರಾದ ವಿನೋದ್ ರಾಜ್ , ಹಾಗೂ ನಳಿನಿ, ಬಂಧು ಮಿತ್ರರು, ಕುಟುಂಬಸ್ಥರನ್ನು ಅಗಲಿದ್ದಾರೆ.
ಶಾಸಕರಾದ ಹರೀಶ್ ಪೂಂಜರವರು ಹಾಗೂ ವಿವಿಧ ಕ್ಷೇತ್ರದ ಗಣ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಮೃತರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.