April 16, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಪರೀಕ ಆತ್ರಾಡಿ ಮಸೀದಿಯಿಂದ ಶ್ರೀನಿವಾಸ ದೇವಸ್ಥಾನದವರೆಗೆ ಅಗಲೀಕರಣದೊಂದಿಗೆ ಡಾಮರೀಕರಣಕ್ಕೆ ಚಾಲನೆ

ಪರೀಕ ಆತ್ರಾಡಿ ಮಸೀದಿಯಿಂದ ಆರಂಭಿಸಿ ಶ್ರೀ ಶ್ರೀನಿವಾಸ ದೇವಸ್ಥಾನದವರೆಗೆ ಮಹತ್ವಾಕಾಂಕ್ಷೆಯ ಮಾರ್ಗದ ಅಗಲೀಕರಣದೊಂದಿಗೆ ಡಾಮರೀಕರಣದ ಕೆಲಸಕ್ಕೆ ಶ್ರೀ ದೇವರ ಪ್ರಸಾದ ಹಾಕಿ ಅರ್ಚಕರು ಕಾಯಿ ಒಡೆಯುವ ಮೂಲಕ ಇಂದು ಚಾಲನೆಗೊಳಿಸಲಾಯಿತು.


ವಿನಯ ಕುಮಾರ್ ಸೆೊರಕೆ ಯವರ ಶಿಫಾರಸಿನೊಂದಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕೀಹೊಳಿ ಯವರ ಅನುದಾನದಲ್ಲಿ, ಗುತ್ತಿಗೆದಾರರಾದ ಮುನಿಯಾಲು ಉದಯ ಕುಮಾರ್ ಶೆಟ್ಟಿ ರವರ ಸತತ ಪ್ರಯತ್ನ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಇಸ್ಮಾಯಿಲ್ ರವರ ಮುತುವರ್ಜಿಯಲ್ಲಿ ಕೆಲಸವು ಕಾರ್ಯಗತಗೊಂಡಿದೆ.


ಈ ಸಂದರ್ಭದಲ್ಲಿ ಶಾಂತಿವನ ಟ್ರಸ್ಟ್ ಧರ್ಮಸ್ಥಳ ಇದರ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ, ಇಸ್ಮಾಯಿಲ್, ಸೋಮನಾಥ್ ಶೆಟ್ಟಿ , ಡಾ. ಗೋಪಾಲ್ ಪೂಜಾರಿ, ಡಾ ಶೋಭಿತ್ ಶೆಟ್ಟಿ, ಪ್ರವೀಣ್ ಕುಮಾರ್ , ಹಾಜಿ ಅಬೂಬಕ್ಕರ್ , ಸೌಖ್ಯವನ ಆಡಳಿತ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Related posts

ನಿಡ್ಲೆ ಹಾಗೂ ಬೂಡುಜಾಲುವಿನಲ್ಲಿ ಸೌಜನ್ಯಪರ ಹಾಕಿದ ಬ್ಯಾನರ್ ನ್ನು ಕಿತ್ತೆಸೆದ ಕಿಡಿಗೇಡಿಗಳು

Suddi Udaya

ಪುದುವೆಟ್ಟು ಓಂಶಕ್ತಿ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷರಾಗಿ ವಿನಯಚಂದ್ರ , ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ಕೆ. ಆಯ್ಕೆ

Suddi Udaya

ಜಿನ ಭಜನೆ ಸ್ಪರ್ಧೆಯಲ್ಲಿ ಉಜಿರೆಯ 4 ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ

Suddi Udaya

ಬೆಳ್ತಂಗಡಿ: ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ

Suddi Udaya

ಕಲ್ಲೇರಿ: ನಿಸರ್ಗ ರಿಕ್ಷಾ ಚಾಲಕ – ಮಾಲಕರ ಸಂಘದ ವಾರ್ಷಿಕ ಮಹಾಸಭೆ

Suddi Udaya
error: Content is protected !!