
ಬಂದಾರು : ಇಲ್ಲಿಯ ಕುಂಟಾಲಪಲ್ಕೆಯ ನೆಲ್ಲಿಗೇರು ಎಂಬಲ್ಲಿ ಒಂಟಿ ಸಲಗವು ದಾಳಿ ಮಾಡಿದ್ದು ಅಪಾರ ಕೃಷಿ ಹಾನಿ ಮಾಡಿದ ಘಟನೆ ಫೆ.19 ರಂದು ರಾತ್ರಿ ನಡೆದಿದೆ.

ಕಾಡಾನೆಯು ಬಾಲಕೃಷ್ಣ ಗೌಡ, ಮೋನಪ್ಪ ಗೌಡರವರ ಗದ್ದೆಯ ಕೃಷಿಗಳಿಗೆ ಅಪಾರ ಹಾನಿ ಮಾಡಿದೆ. ನಂತರ ರಾಮಣ್ಣ ಗೌಡ ರವರ ತೋಟದ ಕಬ್ಬು, ಬಾಳೆ ಗಿಡಗಳನ್ನು ನಾಶ ಮಾಡಿದ್ದು ಅಪಾರ ಕೃಷಿ ಹಾನಿ ಮಾಡಿದೆ.