25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆಯಲ್ಲಿ ಮೆಸ್ಕಾಂ ಜನಸಂಪರ್ಕ ಸಭೆ

ಉಜಿರೆ : ತಾಲೂಕಿನ ವಿದ್ಯುತ್ ಬಳಕೆದಾರರ ಜನ ಸಂಪರ್ಕ ಸಭೆ ಉಜಿರೆಯ ಮೆಸ್ಕಾಂ ಉಪ ವಿಭಾಗದ ಕಚೇರಿಯಲ್ಲಿ ಫೆ.20 ರಂದು ಜರಗಿತು.
ನೂತನ ಸಬ್ ಸ್ಟೇಷನ್ ಫೀಡರ್ ಗಳನ್ನು ನಿರ್ಮಿಸಲು ಸರಕಾರಿ ಜಾಗ ಇಲ್ಲದಿರುವ ಕಡೆ ಖಾಸಗಿ ಜಾಗಗಳನ್ನು ಖರೀದಿಸಬೇಕು ಎಂಬ ವಿಚಾರವನ್ನು ಕಡಿರುದ್ಯಾವರ ಗ್ರಾಮದ ಸುದರ್ಶನ್ ರಾವ್ ಪ್ರಸ್ತಾಪಿಸಿದರು.
ಈ ವೇಳೆ ಮಾತನಾಡಿದ ಬಂಟ್ವಾಳ ವಿಭಾಗದ ಇಇ ವೆಂಕಟೇಶ್, ಜಿಲ್ಲಾಧಿಕಾರಿಗಳು ನಿಗದಿಪಡಿಸಿದ ದರದಲ್ಲಿ ಸ್ಥಳ ಕೊಡುವವರು ಇದ್ದಲ್ಲಿ ಇಲಾಖೆ ಸಿದ್ಧವಿದೆ ಎಂದರು.


ಬೆಳಾಲಿನಲ್ಲಿ 110 ಕೆವಿ ಸಬ್ ಸ್ಟೇಷನ್ ನಿರ್ಮಾಣಕ್ಕೆ ಅರಣ್ಯ ಇಲಾಖೆಯ ಹಸ್ತಕ್ಷೇಪ ಇರುವ ಕುರಿತು ಸಭೆಗೆ ತಿಳಿಸಲಾಯಿತು.
ಬೆಳಾಲು ಫೀಡರ್ ನಲ್ಲಿ ಹೆಚ್ಚಿನ ವಿದ್ಯುತ್ ಸಮಸ್ಯೆ ಇರುವ ಕುರಿತು ಪದ್ಮಗೌಡ ಅವರು ಗಮನ ಸೆಳೆದರು.
ಬೆಳಾಲು ಫೀಡರ್ ಗೆ ಕಕ್ಕಿಂಜೆ ಸಬ್ ಸ್ಟೇಷನ್ ನಿಂದ ವಿದ್ಯುತ್ ಪೂರೈಕೆ ವ್ಯವಸ್ಥೆ ಮಾಡಲಾಗಿದೆ ಇದರಿಂದ ಸಮಸ್ಯೆ ಪರಿಹಾರವಾಗಲಿದೆ ಎಂದು ಅಧಿಕಾರಿ ಉತ್ತರಿಸಿದರು.
ದಾಮೋದರ ಸುರುಳಿ ಅವರು ಮಾತನಾಡಿ ರೋಸ್ಟರ್, ಪವರ್ ಕಟ್ ನ ವೇಳಾಪಟ್ಟಿಯನ್ನು ಗ್ರಾಹಕರಿಗೆ ನೀಡುವಂತೆ ಆಗ್ರಹಿಸಿದರು.


ಮುಂಡಾಜೆಯ ಅರಳಿ ಕಟ್ಟೆ ಪರಿವರ್ತಕದ ಲೈನ್ ನ ಸುಮಾರು 100 ಮೀ. ನಷ್ಟು ದೂರಕ್ಕೆ ವಿದ್ಯುತ್ ಕಂಬಗಳಿಲ್ಲದೆ ಅಪಾಯಕಾರಿ ಸ್ಥಿತಿ ಇದೆ ಎಂಬ ವಿಚಾರವನ್ನು ಪುಷ್ಪರಾಜ ಶೆಟ್ಟಿ ಗಮನಕ್ಕೆ ತಂದರು.
ಪವರ್ ಮ್ಯಾನ್ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಉಜಿರೆ ಗ್ರಾಪಂ ಸದಸ್ಯ ನಾಗೇಶ್ ರಾವ್ ಸಭೆಗೆ ತಿಳಿಸಿದರು.
ಜನಸಂಪರ್ಕ ಸಭೆಯಲ್ಲಿ ಬಂದಿರುವ ದೂರುಗಳನ್ನು ಪರಿಶೀಲಿಸಿ ಶೀಘ್ರ ಕ್ರಮ ಕೈಗೊಳ್ಳುವ ಕುರಿತು ಅಧಿಕಾರಿಗಳು ಭರವಸೆ ನೀಡಿದರು.

ಇಕ್ಕಟ್ಟಿನ ಜಾಗ : ಮೆಸ್ಕಾಂ ಕಚೇರಿಯ ತೀವ್ರ ಇಕ್ಕಟ್ಟಿನ ಜಾಗದಲ್ಲಿ ಸಭೆ ನಡೆಸಿರುವುದು ವಿದ್ಯುತ್ ಬಳಕೆದಾರರ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಯಿತು.ಮುಂದಿನ ಸಭೆಯನ್ನು ವಿಶಾಲವಾದ ಜಾಗದಲ್ಲಿ ಆಯೋಜಿಸುವಂತೆ ವಿದ್ಯುತ್ ಬಳಕೆದಾರರು ಆಗ್ರಹಿಸಿದರು.


ಮಂಗಳೂರು ಮೆಸ್ಕಾಂ ವೃತ್ತದ ಎಸ್ ಇ ಕೃಷ್ಣರಾಜ ಉಪಸ್ಥಿತರಿದ್ದರು. ಬೆಳ್ತಂಗಡಿ ಮೆಸ್ಕಾಂ ಉಪ ವಿಭಾಗದ ಎಇಇ ಕ್ಲೆಮೆಂಟ್ ಬೆಂಜಮಿನ್ ಬ್ರ್ಯಾಗ್ಸ್ ಸ್ವಾಗತಿಸಿದರು. ಉಜಿರೆ ಉಪ ವಿಭಾಗದ ಎಇಇ ಈ ಪ್ರವೀಣ್ ವಂದಿಸಿದರು.

Related posts

ಎಕ್ಸೆಲ್ ಕಾಲೇಜಿನಲ್ಲಿ ಪ.ಪೂ. ವಿಜ್ಞಾನ ವಿಭಾಗದ ಶೈಕ್ಷಣಿಕ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಉಜಿರೆಯ ಎಸ್‌ಡಿಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನಗಳ ಕಾಲೇಜಿಗೆ ಮತ್ತೊಮ್ಮೆ ಶ್ರೇಷ್ಠತೆ ಸಾಬೀತು

Suddi Udaya

ಜ.4: ಓಡಿಲ್ನಾಳ ಫ್ರೆಂಡ್ಸ್ ಪಣೆಜಾಲು ಆಶ್ರಯದಲ್ಲಿ 15ನೇ ವರ್ಷದ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಜನಾ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಮಿಷ್‌ಮಷ್ ಫ್ಯಾನ್ಸಿ ಶುಭಾರಂಭ

Suddi Udaya

ಧರ್ಮಸ್ಥಳ ಲಕ್ಷದೀಪೋತ್ಸವ : ರಾಜ್ಯಮಟ್ಟದ 44ನೇ ವಷ೯ದ ವಸ್ತುಪ್ರದರ್ಶನ ಉದ್ಘಾಟನೆ

Suddi Udaya

ಧರ್ಮಸ್ಥಳ : ಶ್ರೀ ಮಂ. ಸ್ವಾ. ಅ.ಹಿ. ಪ್ರಾ. ಶಾಲೆಯಲ್ಲಿ ಶಿಕ್ಷಕಿ ಶ್ರೀಮತಿ ಗಿರಿಜಾ ಕುಮಾರಿ ಡಿ. ಎ ರವರಿಗೆ ಬೀಳ್ಕೊಡುಗೆ

Suddi Udaya
error: Content is protected !!