23.1 C
ಪುತ್ತೂರು, ಬೆಳ್ತಂಗಡಿ
February 23, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಖಾಸಗಿ ಬಸ್ ನೌಕರರ ಸಂಘ ಜಿಲ್ಲಾ ಘಟಕದ ಉದ್ಘಾಟನೆ

ಬೆಳ್ತಂಗಡಿ : ಖಾಸಗಿ ಬಸ್ ನೌಕರರ ಸಂಘ ಜಿಲ್ಲಾ ಘಟಕದ ಉದ್ಘಾಟನೆಯ ಕಾರ್ಯಕ್ರಮ ಫೆ. 18 ರಂದು ಉಪ್ಪಿನಂಗಡಿಯ ಹೆಚ್ ಎಂ ಹಾಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಖಾಸಗಿ ಬಸ್ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಸಿದ್ದಿಕ್ ಕೆಂಪಿ ವಹಿಸಿದ್ದರು..

ಖಾಸಗಿ ಬಸ್ ನೌಕರರ ಸಂಘದ ಕಳೆದ ಐದಾರು ವರ್ಷಗಳಿಂದ ನಡೆದು ಬಂದ ದಾರಿಯನ್ನು ಖಾಸಗಿ ಬಸ್ ನೌಕರ ಸಂಘದ ಗೌರವ ಸಲಹೆಗಾರದ ಚಿದಾನಂದ ಸಾಲ್ಯಾನ್ ಇವರು ಪ್ರಾಸ್ತವಿಕ ನುಡಿಗಳೊಂದಿಗೆ ಮಾತನಾಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಖಾಸಗಿ ಬಸ್ ನೌಕರರ ಸಂಘದ ಕಾನೂನು ಸಲಹೆಗಾರರಾದ ಪ್ರಶಾಂತ್ ಎಂ ಇದೇ ಪ್ರಥಮ ಬಾರಿಗೆ ಖಾಸಗಿ ಬಸ್ ನೌಕರರ ಸಂಘ ನಮ್ಮ ತಾಲೂಕಿನಲ್ಲಿ ಆದದ್ದು ಬಹಳ ಸಂತೋಷಕವಾದ ವಿಷಯ ಎಂದು ತಿಳಿಸಿ ಇನ್ನು ಮುಂದಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಎಲ್ಲಾ ನೌಕರರ ಸಂಘವನ್ನು ಸೇರಿಸಿ ಸಾರ್ವಜನಿಕರಿಗೆ ಹಾಗೂ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ಮತ್ತು ಕೊಡುಗೆಗಳನ್ನು ನೀಡಿ ಎಂದು ಶುಭ ಹಾರೈಸಿದರು .


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಾಮಾಜಿಕ ಕಾರ್ಯಕರ್ತರಾದ ಇಬ್ರಾಹಿಂ ದುಬೈಲ ಖಾಸಗಿ ಬಸ್ ನೌಕರರ ಶಿಸ್ತು ನಿಯಮಗಳನ್ನು ತಿಳಿಸಿದರು..
ಈ ಸಂದರ್ಭದಲ್ಲಿ ಖಾಸಗಿ ಬಸ್ ನೌಕರರ ಸಂಘದ ಕಾನೂನು ಸಲಹೆಗಾರದ ಪ್ರಸಾದ್ ಕುಮಾರ್ ಪುತ್ತೂರು, ಖಾಸಗಿ ಬಸ್ ನೌಕರರ ಸಂಘದ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ ಬೆಳ್ತಂಗಡಿ, ಖಾಸಗಿ ಬಸ್ ನೌಕರ ಸಂಘದ ಉಪಾಧ್ಯಕ್ಷ ನಾರಾಯಣ ಉಪ್ಪಿನಂಗಡಿ ಉಪಸ್ಥಿತರಿದ್ದರು.

ಈ ವೇಳೆ ಸತತ ಐದಾರು ವರ್ಷಗಳಿಂದ ಸಂಘದ ಅಧ್ಯಕ್ಷರಾಗಿರುವಂತಹ ಸಿದ್ದಿ ಕೆಂಪಿ ಇವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.. ಅದೇ ರೀತಿ ಖಾಸಗಿ ಬಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾದ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕರದ ದೀಪಕ್ ಜಿ ಬೆಳ್ತಂಗಡಿಯವರನ್ನು ಕೂಡ ಖಾಸಗಿ ಬಸ್ ನೌಕರರ ಸಂಘ ವತಿಯಿಂದ ಸನ್ಮಾನಿಸಲಾಯಿತು…

ಖಾಸಗಿ ಬಸ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾದ ದೀಪಕ್ ಜಿ ಬೆಳ್ತಂಗಡಿ ಕಾರ್ಯಕ್ರಮ ನಿರೂಪಿಸಿದರು..

ಖಾಸಗಿ ಬಸ್ ನೌಕರರ ಸಂಘದ ಕೋಶಾಧಿಕಾರಿ ಇಲಿಯಾಸ್ ಸ್ವಾಗತಿಸಿ ಧನ್ಯವಾದವಿತ್ತರು. ಈ ಸಂದರ್ಭದಲ್ಲಿ ಬೆಳ್ತಂಗಡಿ ಮತ್ತು ಉಪ್ಪಿನಂಗಡಿ ಖಾಸಗಿ ಬಸ್ ನೌಕರರ ಸಂಘದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು

Related posts

ಉಜಿರೆ : ಕುಂಜರ್ಪ ಕೊರಗಜ್ಜ ದೈವದ ನೇಮೋತ್ಸವ

Suddi Udaya

ಕಾಯರ್ತಡ್ಕ: ಒಕ್ಕೂಟಗಳ ಪದಗ್ರಹಣ ಸಮಾರಂಭ

Suddi Udaya

ಉಜಿರೆ-ಉಪ್ಪಿನಂಗಡಿ ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಬೃಹತ್ ಸಾರಿ ಮೇಳ: ಸೀರೆಗಳ ಮೇಲೆ ಶೇ.50 ಡಿಸ್ಕೌಂಟ್: ಕೆಲವೇ ದಿನಗಳು ಮಾತ್ರ

Suddi Udaya

ಹೆಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಮೇ.31 ಕೊನೆಯ ದಿನ

Suddi Udaya

ಮಾಚಾರಿನಲ್ಲಿ 32ನೇ ವರ್ಷದ ಶ್ರೀ ಕೃಷ್ಣಜನ್ಮಾಷ್ಟಮಿ ಆಚರಣೆಯ ಉದ್ಘಾಟನೆ

Suddi Udaya

ಉಜಿರೆಯ ಡಾ| ಸುಜಾತ ದಿನೇಶ್ ಅವರಿಗೆ ಪಿ ಹೆಚ್ ಡಿ ಪದವಿ

Suddi Udaya
error: Content is protected !!