ಮಡಂತ್ಯಾರು; ಬಿ ಎಂ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಸಭೆಯು ಇತ್ತೀಚೆಗೆ ಕೊಲ್ಪದಬೈಲು ಎಸ್ ಕೆ ಸಭಾ ಭವನದಲ್ಲಿ ಅಧ್ಯಕ್ಷರಾದ ಸುಲೈಮಾನ್ ಶೇಕ್ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾಲಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪುನೀತ್ ಕುಮಾರ್. ಪದ್ಮನಾಭ ಸಾಲಿಯನ್ ಮಾಲಾಡಿ, ಬೇಬಿ ಸುವರ್ಣ, ಮಹಮ್ಮದ್ ಹಾಲಿ ಕೊಲ್ಪದಬೈಲ್, ಉಮೇಶ್, ರಹಿಮಾನ್ ಪಡ್ಪು, ಬಿನೋಯ್ ಜೋಸೆಫ್ ಮಂಗಳೂರು, ಉಮರಬ್ಬ ಮದ್ದಡ್ಕ, ಸುಲೈಮಾನ್ ಮುಂಡಾಡಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ರಶೀದ್ ಮುಂಡಾಡಿ ಇವರನ್ನು ಸನ್ಮಾನಿಸಲಾಯಿತು ಹಾಗೂ ಮುಂದಿನ ಅವಧಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.