
ಬೆಳ್ತಂಗಡಿ: ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಪ್ರತಿಭೆಗಳು ಒಂದಲ್ಲ ಒಂದು ಕ್ಷೇತ್ರದಲ್ಲಿದ್ದು ಸ್ಥಳಿಯವಾಗಿ ಗುರುತಿಸುವವರು ಕಡಿಮೆ. ತೆರೆಮರೆಯ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಇನ್ನಷ್ಡು ಸಾಧನೆ ಮಾಡಲು ಸಾಧ್ಯ. ಇಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಅದೆಷ್ಟೋ ಕಲಾವಿದರನ್ನು ಗುರುತಿಸುವ ಕಾರ್ಯಮಾಡುತ್ತಿದ್ದು ಇದು ಕಲೆ ಮತ್ತು ಕಲಾವಿದರನ್ನು ಬೆಳೆಸುವ ಕಾರ್ಯ ಎಂದು ಕಿರುತೆರೆ ನಿರ್ದೇಶಕ ಸುಭಾಶ್ ಅರ್ವ ಹೇಳಿದರು.

ಅವರು ಫೆ.19 ರಂದು ಕುತ್ಯಾರು ಶ್ರಿ ಸೋಮನಾಥೇಶ್ವರ ದೇವಸ್ಥಾನದ ಜಾತ್ರೋತ್ಸವ ಸಂದರ್ಭ ಬೆಳ್ತಂಗಡಿ ಸುವರ್ಣ ಆರ್ಕೆಡ್ ಬಳಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ರಂಗಸಮ್ಮಾನ್ ಗೌರವ ಸ್ವೀಕರಿಸಿ ಮಾತನಾಡಿದರು.

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಕಳೆದ ಹದಿನೈದು ವರ್ಷಗಳಿಂದ ಅದೆಷ್ಟೋ ಕಲಾವಿದರನ್ನು ಬೆಳಕಿಗೆ ತರುವ ಪ್ರಯತ್ನ ಮಾಡಿದ್ದು ಜೊತೆಗೆ ತುಳುನಾಡ ಸಂಸ್ಕ್ರತಿಯನ್ನು ಬೆಳೆಸುವ ಕಾರ್ಯ ಶ್ಳಾಘನೀಯ ಎಂದರು.
ಅಯೋಧ್ಯೆಯ ಶ್ರಿರಾಮ ವಿಗ್ರಹ ನಿರ್ಮಾಣದಲ್ಲಿ ಸೇವೆ ಸಲ್ಲಿಸಿದ ಶಿಲ್ಪಿ ಜಯಚಂದ್ರ ಅಚಾರ್ಯ ನಾಳ ರಂಗಸಮ್ಮಾನ್ ಗೌರವ ಸ್ವಿಕರಿಸಿ ಮಾತನಾಡಿ ಗ್ರಾಮೀಣ ಭಾಗದಿಂದ ಬೆಳೆದು ಅಯೋದ್ಯೆಯಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ದೇವರ ,ಗುರುಗಳ ಅನುಗ್ರಹವೇ ಕಾರಣ ಎಂದರು.

ಯಕ್ಷಗಾನ ಕ್ಷೇತ್ರದಲ್ಲಿ ವಿಶಿಷ್ಟ ಸಾದನೆ ಮಾಡುತ್ತಿರುವ ಮನೋಜ್ ಕುಮಾರ್ ವೇಣೂರು ಇವರಿಗೆ ರಂಗಸಮ್ಮಾನ್ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬಳ್ಳಮಂಜ ಶ್ರೀ ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೆಸರ ಡಾ ಹರ್ಷಸಂಪಿಗೆತ್ತಾಯ, ಯಕ್ಷಗಾನ ಕಲಾವಿದ ನಾರಾಯಣ ಗೌಡ ಕೊಳ್ತಿಗೆ, ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಪತ್ರಕರ್ತರಾದ ದೇವಿಪ್ರಸಾದ್, ಮಂಜುನಾಥ ರೈ, ಗಣೇಶ್ ಶಿರ್ಲಾಲ್, ಸಂತೋಷ್ ಪಿ ಕೋಟ್ಯಾನ್ ಬಳಂಜ, ಮನೋಹರ್ ಬಳಂಜ, ಉದ್ಯಮಿ ಚಿದಾನಂದ ಇಡ್ಯ,ಜೆಸಿಐ ವಲಯ ಉಪಾಧ್ಯಕ್ಷ ರಂಜಿತ್ ಹೆಚ್.ಡಿ,ಅಶೋಕ್ ಮಡಂತ್ಯಾರು, ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮಾನಂದ ಸಾಲಿಯಾನ್,ಶಿಕ್ಷಕ ಧರಣೇಂದ್ರ ಜೈನ್, ಪಟ್ಲ ಪೌಂಡೇಶನ್ ಬೆಳ್ತಂಗಡಿ ತಾಲೂಕು ಘಟಕ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ, ಕಾರ್ಯದರ್ಶಿ ಕಿರಣ್ ಶೆಟ್ಟಿ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ಸುವರ್ಣ ಆರ್ಕೆಡ್ ಮಾಲಕ ವೈ ನಾಣ್ಯಪ್ಪ ಪೂಜಾರಿ,ತಾ ಪಂ ಮಾಜಿ ಸದಸ್ಯ ಸುಧೀರ್ ಆರ್ ಸುವರ್ಣ, ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಅಳಂದಂಗಡಿ,ತುಳಸೀದಾಸ್ ಪೈ,ಜೆಸಿಐ ಮಡಂತ್ಯಾರು ಘಟಕಾಧ್ಯಕ್ಷೆ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಗಣೇಶ್ ಕುಮಾರ್ ಹೆಬ್ರಿ, ಕಾವ್ಯಶ್ರಿ ಅಜೇರು ಇವರಿಂದ ಯಕ್ಷ- ಗಾನ-ವೈಭವ ಮತ್ತು ಚೈತ್ಯನ್ಯ ಕಲಾವಿದರು ಹೆಬ್ರಿ ಇವರಿಂದ ಅಷ್ಟಮಿ ನಾಟಕ ಪ್ರದರ್ಶನ ಗೊಂಡಿತು. ಪತ್ರಕರ್ತ ಲಕ್ಷ್ಮೀ ಮಚ್ಚಿನ, ನಿತಿನ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು.