ಲಾಯಿಲ :ಲಾಯಿಲ ಗ್ರಾಮ ಪಂಚಾಯತ್ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಫೆ.21 ರಂದು ಗ್ರಾ.ಪಂ. ಅಧ್ಯಕ್ಷೆ ಜಯಂತಿ ಎಂ.ಕೆ.ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು.
ಹಿಂದುಳಿದ ವರ್ಗಗಳು ಕಲ್ಯಾಣಾಧಿಕಾರಿ ಜೋಸೆಫ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದರು.

ಲಾಯಿಲ ಗ್ರಾಮ ಸಭೆಗೆ 20 ಮಂದಿ ಸದಸ್ಯರು ಪೈಕಿ 10 ಮಂದಿ ಸದಸ್ಯರು ಮಾತ್ರ ಇದ್ದಾರೆ. ಗ್ರಾಮ ಸಭೆಗೆ ಸದಸ್ಯರೇ ಬಾರದೆ ಇದ್ದಲ್ಲಿ ಗ್ರಾಮಸ್ಥರು ಬರುತ್ತಾರ. ವಾರ್ಡ್ -1ರ ಸದಸ್ಯ ಮೋಹನ್ ರವರು ಗ್ರಾಮ ಸಭೆಗೆ 4 ವರ್ಷದಿಂದ ಗ್ರಾಮ ಸಭೆ, ವಾರ್ಡ್ ಸಭೆ ಬರಲಿಲ್ಲ ಎಂದು ಗ್ರಾಮಸ್ಥ ಶೇಖರ್ ಲಾಯಿಲ ಆಕ್ಷೇಪ ವ್ಯಕ್ತಪಡಿಸಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು, ಉಪಾಧ್ಯಕ್ಷೆ ಸುಗಂಧಿ ಜಗನ್ನಾಥ್, ಸದಸ್ಯರಾದ ಆಶಾ ಬೆನಡಿಕ್ಟ ಸಲ್ದಾನ, ಹರೀಶ, ಅರವಿಂದ್ ಕುಮಾರ್, ಪ್ರಸಾದ್ ಶೆಟ್ಟಿ ಏಣಿಂಜೆ, ರಜನಿ, ದಿನೇಶ್ ಶೆಟ್ಟಿ, ಸವಿತಾ ಶೆಟ್ಟಿ, ಮೊಹ್ಮದ್ ಸಲೀಂ, ರೇವತಿ, ಹರೀಶ್ ಕುಲಾಲ್ ಹಾಗೂ ಜಯಂತಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಯಾನಂದ ಅಂಕಾಜೆ ಹಾಗೂ ಉದಯ್ ಕುಮಾರ್ ಮತ್ತು ಕ್ರೀಡಾ ಸಾಧಕಿ ಚಂದ್ರಿಕಾ ಅವರನ್ನು ಸನ್ಮಾನಿಸಲಾಯಿತು.
ಪಿಡಿಓ ಶ್ರೀನಿವಾಸ್ ಸ್ವಾಗತಿಸಿ, ಕಾರ್ಯದರ್ಶಿ ತಾರಾನಾಥ್ ವಾರ್ಡ್ ಸಭೆಗಳ ಬೇಡಿಕೆ ವಾಚಿಸಿದರು.