ಬೆಳ್ತಂಗಡಿ: ರಸ್ತೆ ಬದಿ ಹೈಟೆನ್ಶನ್ ವಿದ್ಯುತ್ ತಂತಿ ಕಡಿದು ಬಿದ್ದು ಬೈಕ್ ಸವಾರರು ಕೂದಲೆಳೆ ಅಂತರದಲ್ಲಿ ಪಾರಾದ ಘಟನೆ ನಡೆದಿದೆ.
ಫೆ.21ರಂದು ರಾತ್ರಿ ದಿಡುಪೆ-ಮುಂಡಾಜೆ ರಸ್ತೆಯ ಕಡಿರುದ್ಯಾವರ ಗ್ರಾಮದ ಕಾನರ್ಪ-ದುಂಬೆಟ್ಟು ಬಳಿ ಸಾಗುವ ವೇಳೆ ವಿದ್ಯುತ್ ತಂತಿ ತುಂಡಾಗಿ ಬೈಕಿನಲ್ಲಿ ಹೋಗುತ್ತಿದ್ದ ಯುವಕರ ಸಮೀಪ ಬಿದ್ದಿದೆ.
ಇದರಿಂದ ವಿಚಲಿತರಾದ ಬೈಕ್ ಸವಾರರಾದ ಮಂಜುನಾಥ, ಆದರ್ಶ ಎಂಬವರು ರಸ್ತೆಗೆ ಬಿದ್ದು ಸಣ್ಣ ಪುಟ್ಟ ಗಾಯಗಳಾಗಿವೆ.