ಕಿಲ್ಲೂರು: ಮಾರಿಗುಡಿ ಯುವ ಕೇಸರಿ ಗೆಳೆಯರ ಬಳಗ ಇದರ ಆಶ್ರಯದಲ್ಲಿ ಬೆಳ್ತಂಗಡಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಷಿಯೇಶನ್ ಇದರ ಸಹಭಾಗಿತ್ವದಲ್ಲಿ ಹೊನಲು ಬೆಳಕಿನ ವಲಯ ಮಟ್ಟದ 12 ತಂಡಗಳ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟ ಹಾಗೂ ವಲಯ ಮಟ್ಟದ ಬಾಲಕಿಯರ ಮ್ಯಾಟ್ ಕಬಡ್ಡಿ ಪಂದ್ಯಾಟವು ಯುವ ಕೇಸರಿ ಟ್ರೋಫಿ ಫೆ.23 ರಂದು ಭದ್ರಕಾಳಿ ದೇವಸ್ಥಾನ ಮಾರಿಗುಡಿ ಕಿಲ್ಲೂರಿನ ಕ್ರೀಡಾಂಗಣದಲ್ಲಿ ಸಂಜೆ 4 ಗಂಟೆಗೆ ನಡೆಯಲಿದೆ.
ಬಹುಮಾನಗಳ ವಿವರ ಪ್ರಥಮ : 8000 ನಗದು ಹಾಗೂ ಯುವಕೇಸರಿ ಟ್ರೋಫಿ , ದ್ವಿತೀಯ : 6000 ನಗದು ಹಾಗೂ ಯುವಕೇಸರಿ ಟ್ರೋಫಿ ತೃತೀಯ : 4000 ನಗದು ಹಾಗೂ ಯುವಕೇಸರಿ ಟ್ರೋಫಿ , ಚತುರ್ಥ : 4000 ನಗದು ಹಾಗೂ ಯುವಕೇಸರಿ ಟ್ರೋಫಿ, ಬಾಲಕಿಯರ ವಿಭಾಗ: ಪ್ರಥಮ : 2000 ನಗದು ಹಾಗೂ ಯುವಕೇಸರಿ ಟ್ರೋಫಿ , ದ್ವಿತೀಯ : 1000 ನಗದು ಹಾಗೂ ಯುವಕೇಸರಿ ಟ್ರೋಫಿ