21.4 C
ಪುತ್ತೂರು, ಬೆಳ್ತಂಗಡಿ
February 25, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಬೆಳ್ತಂಗಡಿ ಮುಳಿಯ ಜ್ಯುವೆಲ್ಸ್ ನಲ್ಲಿ ಡೈಮಾಂಡ್ ಫೇಸ್ಟ್ ಪ್ರಯುಕ್ತ ಆಯೋಜಿಸಿದ್ದ ಲಕ್ಕಿ ಕೂಪನ್ ಬಿಡುಗಡೆ

ಬೆಳ್ತಂಗಡಿ: ಚಿನ್ನಾಭರಣಗಳ ಮೂಲಕ ಬೆಳ್ತಂಗಡಿಗೆ ಮೆರಗು ತಂದ ಸಂಸ್ಥೆ ಮುಳಿಯ. ಗ್ರಾಹಕರಿಗೆ ನಗುಮೊಗದ ಸೇವೆಯಿಂದ ಸಂಸ್ಥೆ ಅಭಿವೃದ್ಧಿ ಹೊಂದಿದೆ. ಮುಳಿಯ ವ್ಯವಹಾರಕ್ಕೆ ಸೀಮಿತವಾಗದೆ ಧಾರ್ಮಿಕತೆ, ಸಾಮಾಜಿಕವಾಗಿ ತೊಡಗಿಸಿಕೊಂಡು, ಹಲವಾರು ಹಬ್ಬ ಹರಿದಿನಗಳನ್ನು ಆಚರಿಸುವ ಮೂಲಕ ಜಿಲ್ಲೆಯ ಹಲವಾರು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದ ಸಂಸ್ಥೆ ಮುಳಿಯ ಜುವೆಲ್ಸ್ ಎಂದು ಅಳಂದಗಡಿ ಸಿಎ ಬ್ಯಾಂಕ್ ಅಧ್ಯಕ್ಷ, ಬೆಳ್ತಂಗಡಿ ಇಕೋಫ್ರೇಶ್ ಎಂಟಪ್ರೈಸಸ್ ಮಾಲಕ ರಾಕೇಶ್ ಹೆಗ್ಡೆ ಬಳಂಜ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಫೆ.೨೪ರಂದು ಬೆಳ್ತಂಗಡಿ ಮುಳಿಯ ಜುವೆಲ್ಸ್ನಲ್ಲಿ ಕಳೆದ ವರ್ಷ ಆಗಷ್ಟ್ ೧೫ರಿಂದ ನವೆಂಬರ್ ೩೦ವರೆಗೆ ನಡೆದಿದ್ದ ಡೈಮಾಂಡ್ ಫೇಸ್ಟ್ ಸಂಧರ್ಭದಲ್ಲಿ ನೀಡಲಾಗಿದ್ದು ಲಕ್ಕಿ ಕೂಪನ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮ್ಯಾನೆಜಿಂಗ್ ಕನ್ಸಲ್‌ಟೆಂಟ್ ವೇಣು ಶರ್ಮ ಮಾತನಾಡಿ, ಕಳೆದ ೬ವರ್ಷಗಳಿಂದ ಬೆಳ್ತಂಗಡಿಯಲ್ಲಿ ಗ್ರಾಹಕರು ಸಂಸ್ಥೆಯನ್ನು ಬೆಳೆಸಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಮತ್ತೆ ಡೈಮಾಂಡ್ ಫೇಸ್ಟ್ ಬರುತ್ತದೆ. ೩೦೦ಕ್ಕೂ ಅಧಿಕ ಮಂದಿ ಗ್ರಾಹಕರು ಕೂಪನ್ ಪಡೆದಿದ್ದಾರೆ. ಕಿಸಾನ್ ಸಂಸ್ಥೆಯೊಂದಿಗೆ ಜೊತೆಗೂಡಿ ಡೈಮಾಂಡ್ ಫೇಸ್ಟ್ ಕಾರ್ಯಕ್ರಮ ಆಯೋಜಿಸಲಾಗಿದೆ. ೮೦ ವರ್ಷಗಳ ಇತಿಹಾಸವಿರುವ ಮುಳಿಯ ಸಮಾಜದೊಂದಿಗೆ ಜೊತೆಗೂಡಿ ಕೆಲಸ ಕಾರ್ಯ ಮಾಡಿದ್ದು ಪ್ರಕೃತಿಕವಿಕೋಪದ ಸಂದರ್ಭದಲ್ಲಿ ಜನರೊಂದಿಗೆ ಮುಳಿಯ ನಿಂತಿರುವ ಸಂಸ್ಥೆಯಾಗಿದೆ ಎಂದು ತಿಳಿಸಿದರು.

ಡೈಮಾಂಡ್ ಫೇಸ್ಟ್ನ ಲಕ್ಕಿ ಕೂಪನ್ ಕಾರಿನ ವಿಜೇತರಾಗಿ ಪ್ರಿಯಾಂಕ್ ಶಿರ್ಲಾಲು(೪೨೬೫) ತಮ್ಮ ಮಡಿಗೇರಿಸಿಕೊಂಡಿದ್ದಾರೆ. ಕಾರ್ಯನಿರ್ವಾಹಕ ಕಾರ್ಯದರ್ಶಿ ಶಿವಕೃಷ್ಣ ಮೂರ್ತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗ್ರಾಹಕರು, ಸಿಬ್ಬಂದಿ ವರ್ಗವದರು ಭಾಗವಹಿಸಿದ್ದರು. ಶಾಖಾ ಪ್ರಬಂಧಕ ಲೋಹಿತ್ ಸ್ವಾಗತಿಸಿ, ಸಿಬ್ಬಂದಿ ಅಶ್ವಥ್ ವಂದಿಸಿ, ಕಲಾವಿದ ಉದಯ್ ಕುಮಾರ್ ಲಾಯಿಲ ನಿರೂಪಿಸಿದರು.

Related posts

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಿರ್ದೇಶಕರುಗಳ ಅವಿರೋಧ ಆಯ್ಕೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಮತ್ತು ವಿದ್ಯಾರ್ಥಿ ಕವಿಗೋಷ್ಠಿ

Suddi Udaya

ಪ್ರಧಾನಿ ಮೋದಿಯವರ ಜನ್ಮದಿನದ ಅಂಗವಾಗಿ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತರಿಂದ ದೇವರಿಗೆ ವಿಶೇಷ ಪೂಜೆ

Suddi Udaya

ಧರ್ಮಸ್ಥಳದಲ್ಲಿ ಗೀತ ನೃತ್ಯಾಲಯ ವಾರ್ಷಿಕೋತ್ಸವ

Suddi Udaya

ಸಿಎ ಪರೀಕ್ಷೆಯಲ್ಲಿ ಕಿನ್ನಿಗೋಳಿ ರಾಹುಲ್ ಉತ್ತೀರ್ಣ

Suddi Udaya

ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನಡೆದ WAVES-24 ಗುರುದೇವ ಕಾಲೇಜಿಗೆ ಪ್ರಶಸ್ತಿ

Suddi Udaya
error: Content is protected !!