ನಡ: ಮಂಜೊಟ್ಟಿ ರಝಾ ಗಾರ್ಡನ್ ಸ್ಟಾರ್‌ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಫೆ.೨೨ರಂದು ಪೋಷಕರ ಮಹಾಸಭೆ ನಡೆಯಿತು.
ಪೋಷಕರನ್ನು ಉದ್ದೇಶಿಸಿ ಮಾತನಾಡಿದ ಖ್ಯಾತ ಪ್ರೇರಕ ಭಾಷಣಕಾರ ಮತ್ತು ಪೋಷಕರ ತಜ್ಞ ರಫೀಕ್ ಮಾಸ್ಟರ್ “ನಮ್ಮ ಹೂಡಿಕೆಯನ್ನು ತಮ್ಮ ಮಕ್ಕಳ ಶಿಕ್ಷಣದ ಮೇಲೆ ಮಾಡಬೇಕು. ಆಗ ಮಕ್ಕಳು ಭವಿಷ್ಯದಲ್ಲಿ ನಮ್ಮ ಆಸ್ತಿಯಾಗುತ್ತಾರೆ ಹಾಗೂ ಪೋಷಕರು ಮಕ್ಕಳಲ್ಲಿ ಇರುವ ಧನಾತ್ಮಕ ಚಿಂತನೆಗಳನ್ನು, ಚಟುವಟಿಕೆಗಳನ್ನು ಹುರಿದುಂಬಿಸಬೇಕು” ಎಂದರು.
ವೇದಿಕೆಯಲ್ಲಿ ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕ ಜನಾಬ್ ಸಯ್ಯದ್ ಹಬೀಬ್ ಸಾಹೇಬ್, , ಕೋಶಾಧಿಕಾರಿ ಸಯ್ಯದ್ ಮಹಮ್ಮದ್ ಇರ್ಫಾನ್, ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್ ಹಾಗೂ ಅರಬಿಕ್ ಶಿಕ್ಷಣ ವಿಭಾಗದ ಮುಖ್ಯೋಪಾಧ್ಯಾಯ ಅಬ್ದುಲ್ ರಝಾಕ್ ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯನಿ ಶ್ರೀಮತಿ ಜಾಕಿನ್ ಬಿನ್ ಸ್ವಾಗತಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಯಲ್ಲಿ ಪೋಷಕರ ಪಾತ್ರ ತುಂಬಾ ಮಹತ್ವದ್ದು. ಪೋಷಕರು ಶಿಕ್ಷಕರೊಂದಿಗೆ ಕೈಜೋಡಿಸಿದರೆ ಮಕ್ಕಳು ಕಲಿಕೆಯಲ್ಲಿ ಇನ್ನಷ್ಟು ಮುಂದುವರಿಯಲು ಸಾಧ್ಯ”ಎಂದರು.
ಕಾರ್ಯದರ್ಶಿ ಸಯ್ಯದ್ ಮಹಮ್ಮದ್ ಅಯ್ಯುಬ್ ಮಾತನಾಡಿ ಶಾಲೆಯಲ್ಲಿನ ಶಿಕ್ಷಣದ ಪ್ರಗತಿಯನ್ನು ಉತ್ತೇಜಿಸುವಲ್ಲಿ ಪೋಷಕರ ಅಭಿಪ್ರಾಯಗಳು ಹಾಗೂ ಸಮಸ್ಯೆಗಳನ್ನು ಆಲಿಸಿದರು ಹಾಗೂ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಅವುಗಳನ್ನು ಅಳವಡಿಸಿಕೊಳ್ಳುವ ಭರವಸೆ ನೀಡಿದರು.
ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಸಭೆಯಲ್ಲಿ ಭಾಗವಹಿಸಿದ್ದರು.