ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆಯ ಅಂಗವಾಗಿ ದೀಪ ಪ್ರಧಾನ ಕಾರ್ಯಕ್ರಮವು ಫೆ.22ರಂದು ಶಾಲಾ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಸಂಚಾಲಕ ಫಾ| ಅಬೆಲ್ ಲೋಬೊ ವಹಿಸಿ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಜೀವನಕ್ಕೆ ಶುಭ ಹಾರೈಸಿದರು.
ಪ್ರಾಂಶುಪಾಲ ಫಾ| ವಿಜಯ್ ಲೋಬೊ ಮಾತನಾಡಿ ವಿದ್ಯಾರ್ಥಿಗಳು ಸಮಾಜದ ದೀಪಗಳಾಗಿ ಬೆಳಗುವಂತೆ ಕರೆಯಿತ್ತರು.
ವಿದ್ಯಾರ್ಥಿಗಳು ಜಗತ್ತಿನ ಬೆಳಕಾಗುವಂತೆ ದೀಪ ಪ್ರಧಾನ ಮಾಡಲಾಯಿತು. 9ನೇ ತರಗತಿಯ ವಿದ್ಯಾರ್ಥಿ ಫಾತಿಮತ್ ಶಿಯಾ ಎಲ್ಲಾ ಕಿರಿಯ ವಿದ್ಯಾರ್ಥಿಗಳ ಪರವಾಗಿ ಶುಭ ಹಾರೈಸಿದರು.
ಕಿರಿಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮನೋರಂಜನಾ ಕ್ರೀಡೆಗಳನ್ನು ನಡೆಸಿಕೊಟ್ಟರು. ವಿಜೇತರಾದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸಂಸ್ಥೆಗೆ 10ನೇ ತರಗತಿಯ ವಿದ್ಯಾರ್ಥಿಗಳು ಜೆರಾಕ್ಸ್ ಯಂತ್ರವನ್ನು ಕಾಣಿಕೆಯಾಗಿ ನೀಡಿದರು. ಕು. ಶ್ರಾವನ್ಯ ಮತ್ತು ಜೆವಿಟಾ
ಕಾರ್ಯಕ್ರಮ ನಿರೂಪಿಸಿದರು. ರೋಸಾ ಜೋಯ್ ಸ್ವಾಗತಿಸಿ, ಇಶ್ಮಾ ಫಾತಿಮಾ ವಂದಿಸಿದರು. ಈ ಸಂದರ್ಭದಲ್ಲಿ ಶಾಲೆಯ ಅನುದೀಪ ೨೦೨೪-೨೫ರ ವಾರ್ಷಿಕ ಸಂಚಿಕೆಯನ್ನು ಅನಾವರಣಗೊಳಿಸಲಾಯಿತು.