ಉಜಿರೆ: ಎಸ್‌ಡಿಪಿಐ ಕುಂಟಿನಿ ಬ್ರಾಂಚ್ ಸಮಿತಿ ವತಿಯಿಂದ ಕುಂಟಿನಿ-ಕುತ್ರೊಟ್ಟು ರಸ್ತೆ ದುರಸ್ತಿ ಆಗ್ರಹಿಸಿ ಬೃಹತ್ ಪ್ರತಿಭಟನೆಯು ಫೆ.24ರಂದು ಉಜಿರೆ ಟಿ.ಬಿ. ಕ್ರಾಸ್ ಜಂಕ್ಷನ್‌ನಲ್ಲಿ ನಡೆಯಿತು.
ಬ್ಲಾಕ್ ಸಮಿತಿ ಸದಸ್ಯ ಆರಿಫ್ ಮಾತನಾಡಿ ರಸ್ತೆ ಕಾಮಗಾರಿ ಕೆಲಸಗಳು ಬಹಳ ನಿಧನಗತಿಯಿಂದ ಸಾಗುತ್ತಿದೆ. ಮನವಿ ಕೊಟ್ಟಾಗ ಸ್ವಲ್ಪ ದಿನ ಕೆಲಸ ನಡೆಯುತ್ತದೆ. ಮತ್ತೆ ನಿಲ್ಲುತ್ತದೆ. ಆದಷ್ಟು ಬೇಗ ಕೆಲಸ ಮಾಡಬೇಕು. ಗುತ್ತಿಗೆದಾರನ್ನು ಬ್ಲಾಕ್ ಲಿಸ್ಟ್‌ಗೆ ಹಾಕಬೇಕು ಎಂದರು.

ಪಿಡಬ್ಲ್ಯೂ ಡಿ ಇಂಜಿನಿಯರ್ ಬಕ್ಕಪ್ಪ ರವರು ಮನವಿಯನ್ನು ಸ್ವೀಕರಿಸಿ, ಗುತ್ತಿಗೆದಾರರಿಗೆ ಪ್ರತಿಭಟನಾ ಸ್ಥಳದಲ್ಲೇ ಕರೆ ಮಾಡಿ ಕೆಲಸವನ್ನು ಆದಷ್ಟು ಬೇಗ ಪೂರ್ಣಗೊಳಿಸಿಸುವಂತೆ ಹೇಳಿದರು.

ಈ ಸಂದರ್ಭದಲ್ಲಿ ಎಸ್‌ಡಿಪಿಐ ಉಜಿರೆ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಆಲಿ, ಕುಂಟಿನಿ ಬ್ರಾಂಚ್ ಉಪಾಧ್ಯಕ್ಷ ರಫೀಕ್ ಕುಂಟಿನಿ, ಉಜಿರೆ ಬ್ಲಾಕ್ ಕಾರ್ಯದರ್ಶಿ ಮರ್ಷದ್ ಉಜಿರೆ, ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಸದಸ್ಯ ಸಹಲ್ ನಿರ್ಸಾಲ್, ಪಂಚಾಯತ್ ಸದಸ್ಯ ಸಲೀಂ ಕುಂಟಿನಿ ಉಪಸ್ಥತರಿದ್ದರು.