30.6 C
ಪುತ್ತೂರು, ಬೆಳ್ತಂಗಡಿ
April 17, 2025
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಎಸ್ಸೆಸ್ಸೆಫ್ ಬೆಳ್ತಂಗಡಿ ಸೆಕ್ಟರ್ ವತಿಯಿಂದ ಸಾರ್ವಜನಿಕ ರಕ್ತದಾನ ಶಿಬಿರ

ಬೆಳ್ತಂಗಡಿ: ಎಸ್ಸೆಸ್ಸೆಫ್ ಬೆಳ್ತಂಗಡಿ ಸೆಕ್ಟರ್ ವತಿಯಿಂದ, ಮಹೂಂ ಶಾಝಿನ್ ಮುರ ಅವರ ಸ್ಮರಣಾರ್ಥವಾಗಿ, ಸುನ್ನಿ ಸ್ಟುಡೆಂಟ್ಸ್ ಫೆಡರೇಷನ್ (SSF) ಕರ್ನಾಟಕ ಬ್ಲಡ್ ಸೈಬೋ ಇದರ 330ನೇ ಮಹತ್ವದ ರಕ್ತದಾನ ಶಿಬಿರವನ್ನು ಫೆ.೨೩ರಂದು ಲಾಯಿಲ ಗ್ರಾಮ ಪಂಚಾಯತ್‌ನಲ್ಲಿ ಆಯೋಜಿಸಲಾಯಿತು.

ಶಿಬಿರವನ್ನು ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯ ಸಹಯೋಗದಲ್ಲಿ ನಡೆಸಲಾಯಿತು.

“SHARE LIFE, DONATE BLOOD” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಲಾದ ಶಿಬಿರದಲ್ಲಿ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ರಶೀದ್ ಮಡಂತ್ಯಾರು, ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ನಾಯಕರುಗಳಾದ ನವಾಝ್ ಮಾವಿನಕಟ್ಟೆ, ಮುಬಿನ್ ಉಜಿರೆ, ಲತೀಫ್ ಅಹ್ಸನಿ ಮಲೆಬೆಟ್ಟು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಸಲೀಂ ಮುರ, ಎಸ್‌ವೈಎಸ್ ಬೆಳ್ತಂಗಡಿ ಸರ್ಕಲ್ ಅಧ್ಯಕ್ಷ ಝಮೀರ್ ಸಅದಿ ಲಾಯಿಲ, ಎಸ್ಸೆಸ್ಸೆಫ್ ಬೆಳ್ತಂಗಡಿ ಡಿವಿಷನ್ ನಾಯಕರುಗಳಾದ ಇಸಾಕ್ ಅಳದಂಗಡಿ, ನಾಸಿರ್ ಪಡ್ಡಂದಡ್ಕ, ಬಾತಿಷ್ ಮುಈನಿ, ಫಯಾಝ್ ಗೇರುಕಟ್ಟೆ, ಎಸ್‌ವೈಎಸ್ ಲಾಯಿಲ ಶಾಖೆಯ ಅಧ್ಯಕ್ಷ ರಫೀಕ್ ಲಾಯಿಲ ಭಾಗವಹಿಸಿದ್ದರು.

ಎಸ್ಸೆಸ್ಸೆಫ್ ಬೆಳ್ತಂಗಡಿ ಸೆಕ್ಟರ್ ಅಧ್ಯಕ್ಷ ಬಾಸಿತ್ ಹಿಮಾಮಿ, ಉಪಾಧ್ಯಕ್ಷ ಇರ್ಷಾದ್ ಕೊಯ್ಯೂರು, ಪ್ರಧಾನ ಕಾರ್ಯದರ್ಶಿ ಶಮೀರ್ ಲಾಯಿಲ, ಕ್ಯಾಬಿನೆಟ್ ಸದಸ್ಯರು ಹಾಗೂ SYS, KMJ, SJM, SMA ನಾಯಕರು, ತೇಜಸ್ವಿನಿ ಆಸ್ಪತ್ರೆಯ ಸಿಬ್ಬಂದಿ ವರ್ಗವು ಶಿಬಿರವನ್ನು ಯಶಸ್ವಿಗೊಳಿಸಲು ಶ್ರಮಿಸಿದರು. ಶಿಬಿರದಲ್ಲಿ ಅನೇಕ ಯುವಕರು, ಸಮಾಜ ಸೇವಕರು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿ ರಕ್ತದಾನ ಮಾಡಿದರು.

ಎಸ್ಸೆಸ್ಸೆಫ್ ಕರ್ನಾಟಕ ಬ್ಲಡ್ ಸೈಬೋ ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದು, ಇದುವರೆಗೆ ಹಲವಾರು ರೋಗಿಗಳಿಗೆ ರಕ್ತವನ್ನು ಪೂರೈಸುವಲ್ಲಿ ಯಶಸ್ಸು ಕಂಡಿದೆ.

Related posts

ಕೊಕ್ಕಡ: 68ನೇ ವರ್ಷದ ನಗರ ಭಜನೆ ಸಪ್ತಾಹದ ಶೋಭಾಯಾತ್ರೆಯಲ್ಲಿ ಗಮನ ಸೆಳೆದ “ಆರ್ಟಿಲರಿ ಗನ್” ಸ್ಥಬ್ದ ಚಿತ್ರ

Suddi Udaya

ಮಚ್ಚಿನ ಗ್ರಾಮದ ಕಾಂಗ್ರೆಸ್ ನ ಸಕ್ರಿಯ ನಾಯಕ ಸಂದೀಪ್ ಮಡಿವಾಳ್ ಬಿಜೆಪಿಗೆ ಸೇರ್ಪಡೆ

Suddi Udaya

ಬೆಳ್ತಂಗಡಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಶಾಸಕರ ವಿರುದ್ಧ ಪ್ರಕರಣ ದಾಖಲು

Suddi Udaya

ಬೆಳ್ತಂಗಡಿ ತಾಲೂಕು ಕೃಷಿಕ ಸಮಾಜ ಅಧ್ಯಕ್ಷರಾಗಿ ಪಿ.ಕೆ. ರಾಜು ಪೂಜಾರಿ

Suddi Udaya

ಭಟ್ಕಳ ಕರಿಕಲ್ ಶಾಖಾ ಮಠದಲ್ಲಿ ಜು.21 ರಿಂದ ಚಾತುರ್ಮಾಸ್ಯ ಆರಂಭ

Suddi Udaya

ಬಿರುವೆರ್ ಕುಡ್ಲ ಬೆಳ್ತಂಗಡಿ ಘಟಕದಿಂದ
ಮಕ್ಕಳ ಶಿಕ್ಷಣಕ್ಕಾಗಿ ರೂ. 2೦ ಸಾವಿರ ನೆರವು

Suddi Udaya
error: Content is protected !!