ಬೆಳ್ತಂಗಡಿ: ದುಡಿಮೆಯೊಂದಿಗೆ ಸಿಕ್ಕ ಒಂದಷ್ಟು ಸಮಯವನ್ನು ಸಮಾಜ ಸೇವೆಗಾಗಿ ಪ್ರಕೃತಿ ಮಾತೆಯ ಅಳಿಲು ಸೇವೆಗಾಗಿ ಮೀಸಲಿಡಲು ಫೆ.೨೩ರಂದು “ಹೆಜ್ಜೆ ಗುರುತು” (ನಮ್ಮ ನಡೆ ಸರಿದಾರಿಯೆಡೆ) ಎಂಬ ಹೊಸ ತಂಡವನ್ನು ರಚಿಸಲಾಯಿತು.

ಇದರ ಉದ್ಘಾಟನೆಯ ಸಲುವಾಗಿ ಧರ್ಮಸ್ಥಳದ ಪ್ರೀತಿನಗರ ರಸ್ತೆಯಲ್ಲಿ ಶ್ರಮದಾನ ಮಾಡುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀಮತಿ ಸೌಮ್ಯ ಮನೋಜ್, ಕುಮಾರಿ ಚೈತ್ರ ಲಕ್ಷ್ಮೀ, ಶ್ರೀಮತಿ ಭವ್ಯಾ ಚಂದ್ರಶೇಖರ ಭಾಗಿಯಾಗಿದ್ದರು.