ಬಂದಾರು: ಪೆರ್ಲ-ಬೈಪಾಡಿ ಸ.ಹಿ.ಪ್ರಾ. ಶಾಲೆಯಲ್ಲಿ ಮೆಟ್ರಿಕ್ ಮೇಳ ಫೆ.24ರಂದು ಆಯೋಜಿಸಲಾಗಿತ್ತು. ಸಂತೆ ಮೇಳದ ಉದ್ಘಾಟನೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ದಾಮೋದರ ಕೆ. ನೆರವೇರಿಸಿದರು.
4ರಿಂದ 7ನೇ ತರಗತಿ ವಿದ್ಯಾರ್ಥಿಗಳು ವ್ಯಾಪಾರ ಮಾಡಿದರು. ತರಕಾರಿ, ಹಣ್ಣು, ಫ್ಯಾನ್ಸಿ ಸ್ಟೋರ್, ಹೋಟೆಲ್, ಬೇಕರಿ ಪದಾರ್ಥಗಳು, ಆಟದ ಸ್ಟಾಲ್‌ಗಳು ಇದ್ದವು.

ಕಾರ್ಯಕ್ರಮದಲ್ಲಿ ಬಂದಾರು ಗ್ರಾಮ ಪಂಚಾಯತು ಸದಸ್ಯೆ ಶ್ರೀಮತಿ ಅನಿತಾ ಕೆ. ಇವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯಿನಿ ನಳಿನಿ, ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.