ಉಜಿರೆ : ಕರ್ನಾಟಕ ಮುಸ್ಲಿಂ ಜಮಾತ್ ಉಜಿರೆ ಸರ್ಕಲ್ ಸಮಿತಿಯ ಮಹಾಸಭೆಯು ಉಜಿರೆ ಬದ್ರುಲ್ ಹುದಾ ಮದ್ರಸದಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು.
ಅಧ್ಯಕ್ಷರಾಗಿ ಹಾಜಿ ಹೈದರ್ ಮದನಿ ಉಜಿರೆ, ಕಾರ್ಯದರ್ಶಿಯಾಗಿ ಖಾಲಿದ್ ಮುಸ್ಲಿಯಾರ್ ಬುಸ್ತಾನಿ, ಕೋಶಾಧಿಕಾರಿಯಾಗಿ ಹಂಝಾ ಬಿ ಎ ಮಾಚಾರು, ಉಪಾಧ್ಯಕ್ಷರಾಗಿ ಹಾಜಿ ಉಮರ್ ಕುಂಜಿ, ದಹವಾ ಕಾರ್ಯದರ್ಶಿಯಾಗಿ ಹನೀಫ್ ಮುಸ್ಲಿಯಾರ್, ಮೀಡಿಯಾ ಕಾರ್ಯದರ್ಶಿಯಾಗಿ ರಜಾಕ್ ಫುರ್ಖಾನಿ ನಿಡಿಗಲ್ ,ಇಸಾಬ ಕಾರ್ಯದರ್ಶಿಯಾಗಿ ಇಬ್ರಾಹಿಂ ಹಾಜಿ ಅತ್ತಾಜೆ, ಸಹಾಯ ಕಾರ್ಯದರ್ಶಿಯಾಗಿ ರಜಾಕ್ ಮಾಚಾರು, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಹಮೀದ್ ಗಾಂಧಿನಗರ, ಸಂಘಟನಾ ಕಾರ್ಯದರ್ಶಿಯಾಗಿ ಎಸ್ ಅಬೂಬಕರ್ ಕಕ್ಕೇನಾ ಆಯ್ಕೆಯಾದರು. ಅಲ್ಲದೆ 11 ಮಂದಿ ಕಾರ್ಯಕಾರಿ ಸದಸ್ಯರನ್ನು ಆರಿಸಲಾಯಿತು .
ಎಸ್ಎಂ ಕೋಯಾ ತಂಗಳ್ ಉಜಿರೆ ,ಮಯದ್ದಿ ಕುಂಟಿನಿ, ಉಸ್ತಾದ್ ಯಾಸಿರ್ ಫುರ್ಖಾನಿ ಉಪಸ್ಥಿತರಿದ್ದರು.
ಚುನಾವಣಾ ವೀಕ್ಷಕರಾದ ಇಬ್ರಾಹಿಂ ಕಕ್ಕಿಂಜೆಯವರು ನೇತೃತ್ವ ವಹಿಸಿದರು.