ನಿಡ್ಲೆ ಗ್ರಾಮ ಪಂಚಾಯಿತಿನ ವಿಕಲಚೇತನರ ಗ್ರಾಮ ಸಭೆಯು ಫೆ. 24 ರಂದು ನಿಡ್ಲೆ ಗ್ರಾಮ ಪಂಚಾಯಿತಿನ ಸಭಾಭವನದಲ್ಲಿ ನಡೆಯಿತು .
ಸಭೆಯ ಅಧ್ಯಕ್ಷತೆಯನ್ನು ಪಂಚಾಯಿತಿನ ಅಧ್ಯಕ್ಷೆ ಶ್ರೀಮತಿ ಶ್ಯಾಮಲಾ ವಹಿಸಿಕೊಂಡಿದ್ದರು. ಸಭೆಯಲ್ಲಿ ತಾಲೂಕು ಪಂಚಾಯತ್ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಜಾನ್ ಬ್ಯಾಕ್ಟೀಸ್ಟ್ ಡಿಸೋಜಾ ಇವರು ಸರ್ಕಾರದಿಂದ ಸಿಗುವ ಹಲವು ಯೋಜನೆಗಳ ಬಗ್ಗೆ ವಿಕಲಚೇತನರಿಗೆ ಮಾಹಿತಿಯನ್ನು ನೀಡಿರುತ್ತಾರೆ ಸಭೆಯಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆಯಾದ ಕುಮಾರಿ ಹೇಮಲತಾ ವಾರ್ಷಿಕ ವರದಿಯನ್ನು ಓದಿದರು ಹಾಗೂ ಅನುಮೋದನೆಯನ್ನು ಪಡೆಯಲಾಯಿತು.
ಆರೋಗ್ಯದ ಬಗ್ಗೆ ಸಿಎಚ್ಒ ವಿನುತ ಮಾಹಿತಿ ನೀಡಿದರು. ಎರಡು ಜನ ವಿಕಲಚೇತನರಿಗೆ ವೈದ್ಯಕೀಯ ಸಹಾಯಧನದ ಚೆಕ್ ನ್ನು ನೀಡಲಾಯಿತು.. ಪಂಚಾಯತಿ ವತಿಯಿಂದ ಸಿಗುವ 5% ಅನುದಾನದ ಬಗ್ಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ದಿನೇಶ್ ಎಂ ಮಾಹಿತಿಯನ್ನು ನೀಡಿದರು.