39.1 C
ಪುತ್ತೂರು, ಬೆಳ್ತಂಗಡಿ
February 25, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ಸಮಾಲೋಚನಾ ಸಭೆ: ಅಧ್ಯಕ್ಷರಾಗಿ ಶಶಿಧರ ಶೆಟ್ಟಿ , ಸಂಚಾಲಕರಾಗಿ ಶಾಸಕ ಹರೀಶ್ ಪೂಂಜ

ತೆಕ್ಕಾರು: ಏಳುನೂರು ವರುಷಗಳ ಪುರಾತನವಾದ ದೇವಸ್ಥಾನ ಕಾರಣಾಂತರಗಳಿಂದ ಭೂಗರ್ಭದಲ್ಲಿ ಲೀನವಾಗಿ ಸಂಪೂರ್ಣ ಕುರುಹು ಇಲ್ಲವಾಗಿದ್ದ ತೆಕ್ಕಾರು ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜರ ಮುತುವರ್ಜಿ ವಹಿಸಿ ಜಮೀನಿನ ದಾಖಲೆ ಪತ್ರ ಮಾಡಿಸಿಕೊಟ್ಟಿದ್ದರಿಂದ ಪುರಾತನ ದೇವಾಲಯ ಇದ್ದ ಜಮೀನು ವಶಕ್ಕೆ ಪಡೆಯಲಾಗಿ, ದಿನಾಂಕ 30.10.2023ರಂದು ಮಾಡವುವೆಂಕಟ್ರಮಣ ಭಟ್ ದೈವಜ್ಞರ ನಿರ್ದೇಶನದಂತೆ 05.11.2023.ಭೂಮಿಪೂಜೆ ವೈದಿಕ ವಿಧಿವಿಧಾನಗಳನ್ನ ನೆರವೇರಿಸಿ ಭೂ ಉತ್ಖನನ ಮಾಡಿದಾಗ ಬಾವಿ ಇದ್ದ ಜಾಗದಲ್ಲಿ 15ಅಡಿ ಆಳದಲ್ಲಿ ಭವ್ಯವಾದ ಶ್ರೀ ಗೋಪಾಲಕೃಷ್ಣ ದೇವರ ಭಿನ್ನವಾದ ದೇವರ ವಿಗ್ರಹ ಹಾಗೂ ಅವಶೇಷಗಳು ಪತ್ತೆಯಾಗಿ ಮಾಧ್ಯಮಗಳ ಮೂಲಕ ಜಗಜ್ಜಾಹೀರಾಗಿದೆ.


ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ‌ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ 22.04.23ರಂದು ಶಾಸಕರಾದ ಹರೀಶ್ ಪೂಂಜಾ ಭಾಗವಹಿಸಿ ಶಿಲಾನ್ಯಾಸ ಜರಗಿತು.13.11.2024ರಂದು ನೂತನವಾಗಿ ನಿರ್ಮಿಸಿದ ಗರ್ಭಗುಡಿಯ ಷಢಾದಾರ ಹಾಗೂ ಗರ್ಭನ್ಯಾಸ ವನ್ನು ನಡೆಸಲಾಗಿ ಇದೀಗ ಪುನರುತ್ಥಾನದ ಕಾರ್ಯ ಭರದಿಂದ ಸಾಗುತ್ತಿದೆ. ಊರ ಹಾಗೂ ನೆರೆಯ ಗ್ರಾಮದ ದಾನಿಗಳ ನೆರವಿನಿಂದ ಈಗಾಗಲೇ ಗರ್ಭಗುಡಿಯ ಕೆಲಸ ಸಂಪೂರ್ಣಗೊಂಡಿದ್ದು ಇದೀಗ ಸುತ್ತು ಪೌಳಿಯ ಕೆಲಸಸಾಗುತ್ತಿದ್ದು ಏಪ್ರಿಲ್ 30ರಂದು ವಿಜ್ರಂಭಣೆಯಿಂದ ಶ್ರೀ ಗೋಪಾಲಕೃಷ್ಣ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದೆಂದು ಬ್ರಹ್ಮಕಲಶೋತ್ಸವದ ಸಮಾಲೋಚನಾ ಸಭೆಯಲ್ಲಿ ನಿರ್ಧರಿಸಲಾಯಿತು.

ಹರೀಶ್ ಪೂಂಜಾ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಅಧ್ಯಕ್ಷರಾಗಿ ಶಶಿಧರ ಶೆಟ್ಟಿ ಬರೋಡ, ಗೌರವಾಧ್ಯಕ್ಷರಾಗಿ ಗಣೇಶ್ ರಾವ್ ಕರಾವಳಿ ಕಾಲೇಜು, ಸಂಸದರಾದ ಬ್ರಿಜೇಶ್ ಚೌಟ, ಯೋಗೀಂದ್ರ ಭಟ್ ಉಳಿ, ಕರುಣಾಕರ ಸುವರ್ಣ ಉಪ್ಪಿನಂಗಡಿ, ಸಂಚಾಲಕರಾಗಿ ಹರೀಶ್ ಪೂಂಜಾ, ಕಾರ್ಯಾಧ್ಯಕ್ಷರಾಗಿ ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿ ಪ್ರವೀಣ್ ರೈ, ಕೋಶಾಧಿಕಾರಿಯಾಗಿ ಅಣ್ಣು ಪೂಜಾರಿ ಹಾಗೂ ವಿವಿಧ ಉಪಸಮಿತಿಗಳಿಗೆ ಸಂಚಾಲಕರನ್ನು ಆಯ್ಕೆಗೊಳಿಸಲಾಯಿತು.


ಸಮಾಲೋಚನಾ ಸಭೆಯಲ್ಲಿ ಟ್ರಸ್ಟ್ ಅಧ್ಯಕ್ಷ ನಾಗಭೂಷಣ್ ರಾವ್, ತುಕಾರಾಂ ನಾಯಕ್, ಶಶಿಧರ ಶೆಟ್ಟಿ ಬರೋಡ, ಗಣೇಶ್ ರಾವ್, ಹರೀಶ್ ಪೂಂಜಾ, ಧ.ಗ್ರಾ.ಯೋಜನೆಯ ದಯಾನಂದ ಪೂಜಾರಿ, ನವೀನ್ ನೆರಿಯ ಉಪಸ್ಥಿತರಿದ್ದರು.
.

Related posts

ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು, ಸದಸ್ಯರ ನೇಮಕ

Suddi Udaya

ಬಡಗಕಾರಂದೂರು ಗ್ರಾಮದ ಎ ಒಕ್ಕೂಟದ ಎರಡು ಸ್ವಸಹಾಯ ಸಂಘಗಳ ಉದ್ಘಾಟನೆ

Suddi Udaya

ಉಜಿರೆ: ಕೃಷ್ಣಮೂರ್ತಿ ಹೊಳ್ಳ ನಿಧನ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಫೆ.7-8: ನಾಲ್ಕೂರು ಹುಂಬೆಜೆ ಪಲ್ಕೆಯಲ್ಲಿ ದೊಂಪದ ಬಲಿ ಮತ್ತು ಶ್ರೀ ಕೊಡಮಣಿತ್ತಾಯ ನೇಮ ಹಾಗೂ ಕಲ್ಲುರ್ಟಿ, ಕಲ್ಕುಡ ದೈವಗಳ ನೇಮೋತ್ಸವ

Suddi Udaya

ಕುಕ್ಕೇಡಿ: ಶ್ರೀ ಶಾರಾದಾಂಬ ಮಹಿಳಾ ಭಜನಾ ಸಮಿತಿಯ ವಾರ್ಷಿಕ ಮಹಾಸಭೆ: ನೂತನ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!