ಬಾರ್ಯ : ಬಾರ್ಯ ಗ್ರಾಮ ಪಂಚಾಯತ್ 2024-25ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಫೆ.25 ರಂದು ಗ್ರಾ.ಪಂ. ಅಧ್ಯಕ್ಷ ಪಿ.ಕೆ. ಉಸ್ಮಾನ್ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜರಗಿತು.
ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಧನಂಜಯ್ ಮಾರ್ಗದರ್ಶಿ ಅಧಿಕಾರಿಯಾಗಿ ಸಭೆ ಮುನ್ನಡೆಸಿದರು. ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು.
ಉಪಾಧ್ಯಕ್ಷೆ ಯಶೋಧಾ ವೈ, ಸದಸ್ಯರಾದ ವಸಂತ, ಕಮಲಾಕ್ಷ, ಪುಷ್ಪಾ, ನಾಝಿಯ ಕೆ, ಅನುರಾಗ್ ಎಸ್ ಪಿ., ಸರೋಜಿನಿ, ಉಷಾ ಕಿರಣ್, ನವೀನ್ ಪ್ರಸಾದ್ ಕೆ.ಎಸ್., ಜಯಂತಿ, ಸುಜೀರ್, ಮಹಮ್ಮದ್ ಫೈಝಲ್, ಬಾಲಕೃಷ್ಣ ಶೆಟ್ಟಿ, ಪವಿತ್ರಾ, ಧರ್ಣಪ್ಪ ಗೌಡ ಹಾಗೂ ಜಯಶ್ರೀ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಸಂಜೀವಿನಿ ಒಕ್ಕೂಟದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶೀಲಾ ಅನೂಪಾಲನ ವರದಿ ವಾಚಿಸಿದರು. ಪಿಡಿಒ ಜಯಕೀರ್ತಿ ಸ್ವಾಗತಿಸಿ, ವಂದಿಸಿದರು.