ಬೆಳ್ತಂಗಡಿ: ತಲ್ ಹತ್ ಎಂ ಜಿ ಸವಣಾಲು ಇವರು ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಸುತ್ತಿರುವ ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (ರಿ) ಇದರ ಅಂಗ ಸಂಸ್ಥೆಯಾದ ಕಳೆದ ಹತ್ತು ವರ್ಷಗಳಿಂದ ತಾಂತ್ರಿಕ ವೃತ್ತಿಪರ ತರಬೇತಿಗಳನ್ನು ನೀಡುತ್ತಿರುವ ಹಾಗೂ ಬೆಳ್ತಂಗಡಿಯ ಮೊದಲ ಫ್ಯಾಷನ್ ಡಿಸೈನ್ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾದ ಸಂಸ್ಥೆ, ಮಾತ್ರವಲ್ಲ ಇದೀಗ ಮಂಗಳೂರಿನ ಮುಡಿಪು ಎಂಬಲ್ಲಿ ಇನ್ನೊಂದು ಶಾಖೆಯನ್ನು ತೆರೆದು ಯಶಸ್ವಿಯಾಗಿ ಮುನ್ನಡೆಯುತ್ತಿರುವ ಸಂಸ್ಥೆಯಾಗಿದೆ ಅನುಗ್ರಹ ಟ್ರೈನಿಂಗ್ ಕಾಲೇಜು.

MIFSE ಮತ್ತು ಅನುಗ್ರಹ ಎರಡು ವಿದ್ಯಾಸಂಸ್ಥೆಗಳ ಜಂಟಿ ಸಹಯೋಗ ಮತ್ತು ಯೋಜನೆಗಳೊಂದಿಗೆ ಅತ್ಯುತ್ತಮ ಆಧುನಿಕ ಮತ್ತು ಅತೀ ಬೇಡಿಕೆಗಳಿರುವ ಡಿಪ್ಲೋಮಾ ಮತ್ತು ಪಿ ಜಿ ಡಿಪ್ಲೋಮಾ ಹಾಗೂ ವೃತ್ತಿಪರ ತರಬೇತಿಗಳ ಶಿಕ್ಷಣವನ್ನು ಬೆಳ್ತಂಗಡಿಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಬೆಳ್ತಂಗಡಿಯಲ್ಲಿಯೆ ಶಿಕ್ಷಣ ಪಡೆಯುವ ನಿಟ್ಟಿನಲ್ಲಿ ಬೆಳ್ತಂಗಡಿಯ ಸಂತೆಕಟ್ಟೆ ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿ ಕಾಲೇಜು ಕ್ಯಾಂಪಸ್ ಆರಂಭಗೊಳ್ಳುತ್ತಿದೆ.
ಜ.02 ರಂದು ಮಂಗಳೂರಿನ ಮೈಫ್ಸ್ (MIFSE) ಮಿನರ್ವ ಕಾಲೇಜು ಕ್ಯಾಂಪಸ್ ನಲ್ಲಿ ನಡೆದ ವಿಶೇಷ ಸಭೆಯಲ್ಲಿ ಮೈಫ್ಸ್ (MIFSE) ಮಿನರ್ವ ಕಾಲೇಜು ಇದರ ಚೇರ್ಮೆನ್ ವಿನೋದ್ ಕೆ ಜಾನ್ ಮತ್ತು ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮನೋಜ್ ಪಿ ವಿ ಇವರುಗಳ ತಂಡದ ಸಭೆಯಲ್ಲಿ ಭಾಗವಹಿಸಿದ ಅನುಗ್ರಹ ಎಜುಕೇಶನ್ ಸೋಶಿಯಲ್ ವೆಲ್ಫೇರ್ ಟ್ರಸ್ಟ್ (ರಿ) ಸಂಸ್ಥೆಯ ಸಂಸ್ಥಾಪಕ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಅನುಗ್ರಹ ಟ್ರೈನಿಂಗ್ ಕಾಲೇಜು ಪ್ರಾಂಶುಪಾಲರಾದ ತಲ್ ಹತ್ ಎಂ ಜಿ ಸವಣಾಲು ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಆಡಳಿತ ಮಂಡಳಿ ನಿರ್ದೇಶಕರುಗಳಾದ ಅಬ್ದುಲ್ ಖಾದರ್ ನಾವೂರು ಹಾಗೂ ಮುಹಮ್ಮದ್ ತೌಸೀಫ್ ಕಕ್ಕಿಂಜೆ, ಜಂಟಿ ಸಭೆಯಲ್ಲಿ ಪಾಳ್ಗೊಂಡು ಎಲ್ಲಾ ರೀತಿಯ ಸಾಧಕ ಬಾಧಕಗಳನ್ನು ಚರ್ಚಿಸಿ ಬೆಳ್ತಂಗಡಿಯ ಅತೀ ಬೇಡಿಕೆಗೆ ಅನುಸಾರವಾಗಿ ವಿಶೇಷ ಮತ್ತು ಮಾನ್ಯ ಡಿಪ್ಲೋಮಾ ಕೋರ್ಸುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಜಂಟಿ ಕರಾರಿನೊಂದಿಗೆ ಸಂಸ್ಥೆ ಬೆಳ್ತಂಗಡಿಯಲ್ಲಿ ಅತೀ ಶೀಘ್ರದಲ್ಲಿಆರಂಭಗೊಳ್ಳಲಿದೆ ಎಂದು ಈ ಮೂಲಕ ಪ್ರಕಟಣೆಯಲ್ಲಿ ತಿಳಿಸಿದರು.

ಇದೀಗ ಮತ್ತೆ ಬೆಳ್ತಂಗಡಿಯಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜು ಇದೇ ಶೈಕ್ಷಣಿಕ ವರ್ಷದಲ್ಲಿ ಹೊಸ ಮತ್ತು ಅಂತರರಾಷ್ಟ್ರೀಯ ಮಟ್ಟದ ಪದವಿ ಕೋರ್ಸುಗಳೊಂದಿಗೆ ಪ್ರಾರಂಭಿಸುವ ತಯಾರಿ ಕೆಲಸಗಳು ನಡೆಯುತ್ತಿದೆ.
ಬೆಳ್ತಂಗಡಿಗೆ ಪರಿಚಯಿಸುತ್ತಿರುವ ಡಿಪ್ಲೋಮಾ ಮತ್ತು ಪಿ ಜಿ ಡಿಪ್ಲೋಮಾ ಹಾಗೂ ವೃತ್ತಿಪರ ಕೋರ್ಸುಗಳ ವಿವರ ಇಲ್ಲಿದೆ.
ಡಿಪ್ಲೋಮಾ ಮತ್ತು ಪಿಜಿ ಡಿಪ್ಲೋಮಾ ಕೋರ್ಸುಗಳು , ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ , ಹೆಲ್ತ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ , ಏರೋನಾಟಿಕಲ್ ಮತ್ತು ಮರೈನ್ ಸೇಫ್ಟಿ ಇಂಜಿನಿಯರಿಂಗ್, ಲಾಜಿಸ್ಟಿಕ್ ಮತ್ತು ಸಪ್ಲೈ ಚೈನ್ ಮ್ಯಾನೇಜ್ಮೆಂಟ್ , ಫ್ಯಾಷನ್ ಡಿಸೈನಿಂಗ್ , ಎಸಿ ಮತ್ತು ರೆಫ್ರಿಜರೇಟರ್ ಮೆಕ್ಯಾನಿಕಲ್ , ಟೀಚರ್ಸ್ ಟ್ರೈನಿಂಗ್ ಗಳಂತಹ ಅತೀ ಬೇಡಿಕೆಗಳ ಡಿಪ್ಲೋಮಾ ಪದವಿ ಕೋರ್ಸುಗಳನ್ನು ಬೆಳ್ತಂಗಡಿಯ ಕಾಲೇಜು ಕ್ಯಾಂಪಸ್ ನಲ್ಲೇ ಶಿಕ್ಷಣ ಪಡೆಯುವ ಅವಕಾಶ ಲಭಿಸಲಿದೆ ಎಂದು ಮಂಗಳೂರಿನ MIFSE ಮತ್ತು ಅನುಗ್ರಹ ಟ್ರೈನಿಂಗ್ ಕಾಲೇಜು ಆಡಳಿತ ಮಂಡಳಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಲಾಗಿದೆ.