ಧರ್ಮಸ್ಥಳ: ಇಲ್ಲಿಯ ಅಜಿಕುರಿಯಲ್ಲಿ ಹೆಜ್ಜೇನು ದಾಳಿ ನಡೆಸಿ ಹಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಫೆ.26 ರಂದು ಬೆಳಗ್ಗೆ ನಡೆದಿದೆ.
ಬೆಳಗ್ಗೆ ಸುಮಾರು ಎಂಟು ಗಂಟೆಯ ವೇಳೆ ಅಜಿಕುರಿಯಲ್ಲಿ ಗುಂಪಾಗಿ ಹೆಜ್ಜೇನು ದಾಳಿ ನಡೆಸಿದ್ದು, ಸ್ಥಳೀಯರ ಮೇಲೆ, ಮನೆಗಳಲ್ಲಿ ಇದ್ದವರ ಮೇಲೂ ಹೆಜ್ಜೇನು ದಾಳಿ ನಡೆಸಿದೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದು ಉಜಿರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹೆಜ್ಜೇನುಗಳು ಈಗಲೂ ಆ ಪರಿಸರದಲ್ಲಿ ಹಾರಾಡುತ್ತಿದ್ದು, ಅಜಿಕುರಿ ಪರಿಸರದಲ್ಲಿ ಜನರು ಮನೆಯಿಂದ ಹೊರಗೆ ಬರಲು ಭಯಪಡುವ ಸ್ಥಿತಿ ನಿರ್ಮಾಣವಾಗಿದೆ.